ವಿಶ್ವ ಅಥ್ಲೆಟಿಕ್ಸ್: 4*400 ಮೀಟರ್ ರಿಲೇಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತ

Update: 2024-05-06 07:27 GMT

Photo: AFI

ಬಹಮಸ್: ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ರಿಲೇ ಸ್ಪರ್ಧೆಯ 4*400 ಮೀಟರ್ ವಿಭಾಗದಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಪ್ಯಾರೀಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿವೆ. 3 ನಿಮಿಷಗಳ ಒಳಗಾಗಿ ಬುಡಾಪೆಸ್ಟ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಐದನೇ ಸ್ಥಾನ ಗಳಿಸಿದ ಭಾರತದ ಸಾಧನೆ ಗಮನ ಸೆಳೆದಿತ್ತು. ಸಹಜವಾಗಿಯೇ ಭಾರತದ ನಾಲ್ಕು ಮಂದಿಯ ಮೇಲೆ ಒಲಿಂಪಿಕ್ಸ್ ನ ಒಂದನೇ ಅರ್ಹತಾ ಸುತ್ತಿನಲ್ಲಿ ಭಾರಿ ನಿರೀಕ್ಷೆಗಳಿದ್ದವು. ಒತ್ತಡದ ನಡುವೆಯೂ ಬಹಮಸ್‍ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ.

ಬುಡಾಪೆಸ್ಟ್ ನಲ್ಲಿ ಆ್ಯಕರ್‍ಲೆಗ್ ಹಂತದಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದ ರಾಜೇಶ್ ರಮೇಶ್ ಈ ಬಾರಿ ಎರಡನೇ ಲೆಗ್‍ನಲ್ಲಿ ಎಡವಿದರು. ಬಹು ನಿರೀಕ್ಷೆಯೊಂದಿಗೆ ಆರಂಭವಾದ ಓಟ ಬೇಸರದಿಂದ ಕೊನೆಗೊಂಡಿತು. ಆದರೆ ರವಿವಾರ ಹಿರಿಯ ಓಟಗಾರರಾದ ಆರೋಕ್ಯ ರಾಜ್ವಿ ರಮೇಶ್ ಅವರ ಸ್ಥಾನದಲ್ಲಿ ಓಡಿ ಅಮೆರಿಕದ ಬಳಿಕ ಎರಡನೇ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೆಕ್ಸಿಕೋ ಮತ್ತು ಕೆನ್ಯಾ ಓಟಗಾರರಿಗಿಂತ ಮುನ್ನಡೆ ಸಾಧಿಸಿ, ಒಲಿಂಪಿಕ್ಸ್ ಗೆ ಅರ್ಹತೆ ಸಂಪಾದಿಸಿದರು. ಮುಹಮ್ಮದ್ ಅನಸ್, ಮುಹಮ್ಮದ್ ಅಜ್ಮಲ್, ಅರೋಕ್ಯ ಮತ್ತು ಅಮೋಜ್ ಜಾಕೋಬ್ ಅವರಿದ್ದ ತಂಡ ಈ ಸೀಸನ್‍ನ ಅತ್ಯುತ್ತಮ ಸಾಧನೆಯಾದ 3:03.23 ನಿಮಿಷಗಳಲ್ಲಿ ಓಟ ಪೂರೈಸಿ ಅರ್ಹತೆಯನ್ನು ದೃಢಪಡಿಸಿಕೊಂಡರು.

ಇದಕ್ಕೂ ಮುನ್ನ ಮಹಿಳಾ ತಂಡ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕೂಡಾ ಪ್ಯಾರಿಸ್‍ಗೆ ಟಿಕೆಟ್ ಪಡೆದರು. ರೂಪಲ್ ಚೌಧರಿ, ಎಂಆರ್.ಪೂವಮ್ಮ, ಜ್ಯೋತಿಕಾ ಶ್ರಿದಂಡಿ ಮತ್ತು ಶುಭಾ ವೆಂಕಟೇಶನ್ ಅವರು ಜಮೈಕಾ ಬಳಿಕ ಎರಡನೇ ಸ್ಥಾನ ಪಡೆದರು. ಬ್ರೆಝಿಲ್, ಜರ್ಮನಿ ಹಾಗೂ ಕೊಲಂಬಿಯಾ ನಂತರದ ಸ್ಥಾನಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News