ಮುಂಬೈ ಇಂಡಿಯನ್ಸ್ ಪ್ರಧಾನ ಕೋಚ್ ಆಗಿ ಮಹೇಲ ಜಯವರ್ಧನೆ ಮರು ನೇಮಕ

Update: 2024-10-13 17:09 GMT

Photo: X/ @mipaltan

ಹೊಸದಿಲ್ಲಿ : ಮಹೇಲ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಮತ್ತೆ ನೇಮಕವಾಗಿದ್ದಾರೆ.

ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ 2017ರಿಂದ 2022ರ ತನಕ ಮುಂಬೈ ಕೋಚ್ ಆಗಿದ್ದರು. ಆ ನಂತರ ಮುಂಬೈ ಫ್ರಾಂಚೈಸಿಯ ಗ್ಲೋಬಲ್ ಕ್ರಿಕೆಟ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದರು.

ಮುಂಬೈ ಇಂಡಿಯನ್ಸ್ 2023ರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮಾರ್ಕ್ ಬೌಚರ್ರನ್ನು ಮುಖ್ಯ ಕೋಚ್ ಆಗಿ ನೇಮಿಸಿತ್ತು.ಆದರೆ ಮುಂಬೈ ಫ್ರಾಂಚೈಸಿಯು ಜಯವರ್ಧನೆಯನ್ನು ಮತ್ತೊಮ್ಮೆ ಕೋಚ್ ಆಗಿ ನೇಮಿಸಿದೆ.

ಮುಂಬೈ ಇಂಡಿಯನ್ಸ್ ಕುಟುಂಬದೊಳಗಿನ ನನ್ನ ಪ್ರಯಾಣವು ಸುದೀರ್ಘವಾದುದು. 2017ರಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಲು ಪ್ರತಿಭಾವಂತ ಆಟಗಾರರ ಗುಂಪನ್ನು ಒಟ್ಟುಗೂಡಿಸುವತ್ತ ಗಮನ ಹರಿಸಲಾಯಿತು. ಇದೀಗ ನಾನು ಮತ್ತೊಮ್ಮೆ ಕೋಚ್ ಆಗಿ ತಂಡಕ್ಕೆ ಮರಳುತ್ತಿದ್ದೇನೆ. ನಾವೀಗ ಭವಿಷ್ಯದತ್ತ ನೋಡುತ್ತಿದ್ದು ಮುಂಬೈ ಇಂಡಿಯನ್ಸ್ ಪ್ರೀತಿಯನ್ನು ಮತ್ತಷ್ಟು ಬಲಪಡಿಸಲು, ಮಾಲಿಕರ ದೃಷ್ಟಿಕೋನವನ್ನು, ಅತ್ಯಾಕರ್ಷಕ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಜಯವರ್ಧನೆ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News