ನ್ಯೂಝಿಲ್ಯಾಂಡ್ ವಿರುದ್ಧ ಅಬ್ಬರಿಸಿದ ರಿಷಬ್ ಪಂತ್, ಸರ್ಫರಾಝ್ ಖಾನ್
ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸುರಿಯುತ್ತಿದ್ದ ಮಳೆಯ ನಡುವೆ ಸರ್ಫರಾಝ್ ಖಾನ್, ರಿಷಬ್ ಪಂತ್ ಜೋಡಿಯು ʼಪಂಥʼ ಕಟ್ಟಿದಂತೆ ಅಬ್ಬರದ ಆಟ ಪ್ರದರ್ಶಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಸಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದ್ದ ಭಾರತ ತಂಡವನ್ನು, ಮಳೆಯಾಟದ ನಡುವೆಯೇ ಸರ್ಫರಾಝ್ ಖಾನ್, ರಿಷಬ್ ಪಂತ್ ಜೋಡಿಯು ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ರನ್ ಗಳಿಸಿ ಮುನ್ನಡೆಸಿತು.
ಸರ್ಫರಾಝ್ ಖಾನ್ 150 ರನ್ ಗಳಿಸಿ ನ್ಯೂಝಿಲ್ಯಾಂಡ್ ನ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ರಿಷಬ್ ಪಂಥ್ 99 ರನ್ ಗಳಿಸಿದ್ದಾಗ ವಿಲ್ ಒರೂಕಿ ಅವರಿಗೆ ಬೌಲ್ಡ್ ಆದರು. ಆ ಮೂಲಕ ಒಂದು ರನ್ ಗಳಿಂದ ಶತಕ ವಂಚಿತರಾದರು.
ಮಳೆಯಿಂದ ಕೊಚ್ಚಿ ಹೋಗುತ್ತಿದ್ದ ಪಂದ್ಯದಲ್ಲಿ ಭಾರತವು ನ್ಯೂಝಿಲ್ಯಾಂಡ್ ವಿರುದ್ಧ 89.4 ಓವರ್ ಗೆ 82 ರನ್ ಗಳ ಮುನ್ನಡೆ ಸಾಧಿಸಿದೆ. ಕೆ ಎಲ್ ರಾಹುಲ್, ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದಾರೆ.