ಸ್ವದೇಶದಲ್ಲಿ 12,000 ರನ್ ಕಲೆ ಹಾಕಿದ ಭಾರತದ 2ನೇ ಬ್ಯಾಟರ್ ವಿರಾಟ್ ಕೊಹ್ಲಿ

Update: 2024-09-20 16:33 GMT

ವಿರಾಟ್ ಕೊಹ್ಲಿ | PC : PTI 

ಚೆನ್ನೈ: ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸ್ವದೇಶದಲ್ಲಿ 12,000 ಅಂತರ್‌ರಾಷ್ಟ್ರೀಯ ರನ್ ಕಲೆ ಹಾಕಿದ ಭಾರತದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು.

ಕೊಹ್ಲಿ ಇದೀಗ ಸಚಿನ್ ತೆಂಡುಲ್ಕರ್‌ರನ್ನು ಒಳಗೊಂಡ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಯಾದರು. ತೆಂಡುಲ್ಕರ್ 14,192 ರನ್ ಗಳಿಸಿದ್ದಾರೆ.

ಒಟ್ಟಾರೆ ಕೊಹ್ಲಿ ಅವರು ಸ್ವದೇಶದಲ್ಲಿ 12 ಸಾವಿರ ರನ್ ಮೈಲಿಗಲ್ಲು ಕ್ರಮಿಸಿದ ವಿಶ್ವದ ಐದನೇ ಬ್ಯಾಟರ್ ಆಗಿದ್ದಾರೆ. ಕೊಹ್ಲಿ ಟೆಸ್ಟ್‌ನಲ್ಲಿ 4,161 ರನ್, ಏಕದಿನದಲ್ಲಿ 6,268 ರನ್ ಹಾಗೂ ಟಿ-20 ಪಂದ್ಯದಲ್ಲಿ 1,577 ರನ್ ಗಳಿಸಿದ್ದಾರೆ.

ಸ್ವದೇಶದಲ್ಲಿ 12 ಸಾವಿರ ಅಂತರ್‌ರಾಷ್ಟ್ರೀಯ ರನ್ ಗಳಿಸಿದ ಆಟಗಾರರ ಪಟ್ಟಿ

1 ಸಚಿನ್ ತೆಂಡುಲ್ಕರ್-14,192 ರನ್

2 ರಿಕಿ ಪಾಂಟಿಂಗ್-13,117 ರನ್

3 ಜಾಕ್ ಕಾಲಿಸ್-12,305 ರನ್

4 ಕುಮಾರ ಸಂಗಕ್ಕರ-12,043 ರನ್

5 ವಿರಾಟ್ ಕೊಹ್ಲಿ-12,006 ರನ್

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News