ಶಿವಮೊಗ್ಗ | ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಆರೊಪ; ರೌಡಿಶೀಟರ್ ಕಾಲಿಗೆ ಗುಂಡೇಟು
ಶಿವಮೊಗ್ಗ: ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಒಬ್ಬನ ಕಾಲಿಗೆ ಪೊಲೀಸರು ಗುಂಡು ಹೊಡೆದ ಘಟನೆ ತಾಲೂಕಿನ ದೊಡ್ಡ ದಾನಂದಿ ಗ್ರಾಮದಲ್ಲಿ ವರದಿಯಾಗಿದೆ.
ರೌಡಿಶೀಟರ್ ಸೈಫುಲ್ಲಾ ಖಾನ್ ಅಲಿಯಾಸ್ ಸೈಫ್ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವೊಂದರ ಸಂಬಂಧ ರೌಡಿಶೀಟರ್ ಸೈಫುಲ್ ನನ್ನು ಬಂಧಿಸಲು ಜಯನಗರ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಗಳು ಆಯನೂರು ಸಮೀಪದ ದೊಡ್ಡ ದಾನಂದಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಸೈಫುಲ್ಲಾ ಪೊಲೀಸ ಪೊಲೀಸ್ ಸಿಬ್ಬಂದಿ ನಾಗರಾಜ್ ಮೇಲೆ ಹಲ್ಲೆಗೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆನ್ನಲಾಗಿದೆ.
ಪಿಎಸ್ಐ ನವೀನ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಎಚ್ಚರಿಕೆಗೂ ಬಗ್ಗದ ಹಿನ್ನೆಲೆಯಲ್ಲಿ ಆರೋಪಿ ಕಾಲಿಗೆ ಫೈರ್ ಮಾಡಲಾಗಿದೆ. ಗಾಯಾಳು ಆರೋಪಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ದೊಡ್ಡಪೇಟೆ ಠಾಣೆಯೊಂದರಲ್ಲೇ ಸೈಫು ಮೇಲೆ 16 ಕೇಸ್ ದಾಖಲಾಗಿದೆ. ತುಂಗಾನಗರ ಹಾಗೂ ಜಯನಗರ ಠಾಣೆಯಲ್ಲಿ ತಲಾ ಒಂದು ಕೇಸ್ ಗಳು ಸೈಫುಲ್ಲಾ ಖಾನ್ ವಿರುದ್ದ ದಾಖಲಾಗಿದ್ದವು.
ಈ ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
''ರೌಡಿಶೀಟರ್ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ.ಡಕಾಯಿತಿ, ರಾಬರಿ, ಎನ್ ಡಿ ಪಿ ಎಸ್ ಕಾಯ್ದೆ ಅಡಿ ಈತನ ವಿರುದ್ದ ಪ್ರಕರಣ ದಾಖಲಾಗಿವೆ. ಈತ ರೌಡಿ ಪೌಝಾನ್ ಸಹಚರನಾಗಿದ್ದಾನೆ. ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 307 ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ.ಪಿಎಸ್ಐ ಆತ್ಮರಕ್ಷಣೆಗಾಗಿ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಜೀವಕ್ಕೆ ಯಾವುದೇ ಅಪಾಯ ಇಲ್ಲ. ತನಿಖೆ ಮುಂದುವರಿಯುತ್ತದೆ''
-ಮಿಥುನ್ ಕುಮಾರ್ ಜಿ.ಕೆ, ಎಸ್ಪಿ,ಶಿವಮೊಗ್ಗ