ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ದ್ವೇಷದ ವ್ಯಾಪಾರಕ್ಕೆ ಕರೆ ನೀಡಿದ ಟೆಕ್ಕಿ!

Update: 2023-12-11 16:06 GMT

ಬೆಂಗಳೂರು : ಡಿಸೆಂಬರ್ 11 ರಿಂದ 12ರ ವರೆಗೆ ಇಲ್ಲಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಬಸವಣ್ಣ ದೇವಾಲಯದ ಆವರಣದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಕಡಲೆಕಾಯಿ ಪರಿಷೆಯಲ್ಲಿ ದ್ವೇಶದ ವ್ಯಾಪಾರಕ್ಕೆ ಕರೆ ನೀಡಿ ಟೆಕ್ಕಿಯೊಬ್ಬರು ಸುದ್ದಿಯಾಗಿದ್ದಾರೆ.

@VishwasMPV ಎಂಬ ಹೆಸರಿನ ಸಾಫ್ಟ್ವೇರ್ ಗಣಪತಿ ಎಂಬ ಬಳಕೆದಾರ ʼX ನ ತನ್ನ ಖಾತೆಯಲ್ಲಿ ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರ ಮಾಡುವ ತನ್ನ ದ್ವೇಷದ ನಡೆಯನ್ನು ಟ್ವೀಟ್ ಮೂಲಕ ವಿವರಿಸಿದ್ದಾರೆ. “ಕಡಲೆ ಕಾಯಿ ಪರಿಷೆಯಲ್ಲಿ ವ್ಯಾಪಾರ ಮಾಡುವ ಬಗೆ.1. UPI QR ಕೋಡ್ ಅನ್ನು ಸ್ಕ್ಯಾನ್ ಮಾಡಿ. 2. ನಿಮ್ಮ UPI ಅಪ್ಲಿಕೇಶನ್ನಲ್ಲಿ ಪ್ರದರ್ಶಿಸಲಾದ ಹೆಸರನ್ನು ನೋಡಿ. 3. ನಂತರ ನಿರಾಕರಿಸಿ ಅಥವಾ ಶಾಪಿಂಗ್ ಮುಂದುವರಿಸಿ” ಎಂದು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ವೈರಲಾಗುತ್ತಿದ್ದಂತೆ ನೆಟ್ಟಿಗರಿಂದ ಪರ ವಿರೋಧದ ಚರ್ಚೆ ಪ್ರಾರಂಭವಾಗಿದೆ. ಕಾಂಗ್ರೆಸ್ ವಕ್ತಾರೆ ಲಾವಣ್ಯ ಜೈನ್ ಬಳ್ಳಾಲ್ ಅವರು ರೀಪೋಸ್ಟ್ ಮಾಡಿ ʼಈ ಧರ್ಮಾಂಧ ಎಲ್ಲಿ ಕೆಲಸ ಮಾಡುತ್ತಾನೆಂದು ಯಾರಿಗಾದರೂ ತಿಳಿದಿದೆಯೇ?ʼ ಎಂದು ಪ್ರಶ್ನಿಸಿದ್ದಾರೆ.

 

 

@silent_shishya ಎನ್ನುವ ಬಳಕೆದಾರರು ಟೆಕ್ಕಿಯ ಹಳೆಯ ಟ್ವೀಟ್ ಒಂದನ್ನು ತೆಗೆದು ಮರು ಟ್ವೀಟ್ ಮಾಡಿದ್ದಾರೆ. ಮೂಲ ಟ್ವೀಟ್ ನಲ್ಲಿ ಟೆಕ್ಕಿ ರಕ್ತ ಬೇಕಾಗಿದೆ ಎಂದು ಸ್ಥಳ, ದಿನಾಂಕ ಹೇಳಿ ಬೇಕಾದ ರಕ್ತದ ಬಗ್ಗೆ ಹೇಳಿದ್ದರು. ಅದಕ್ಕೆ ರಿಟ್ವೀಟ್ ಮಾಡುವಾಗ ಸೈಲೆಂಟ್ ಶಿಶ್ಯಾ “ಮುಂದಿನ ಬಾರಿ ಎಲ್ಲ ಕೇಳಿಯೇ ಕೊಡಬೇಕು ಅಣ್ಣನಿಗೆʼ ಎಂದಿದ್ದಾರೆ.

ಪ್ರದೀಪ್ @_Pradeep07 ಎನ್ನುವ ಬಳಕೆದಾರರು “ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ? ಬಲಪಂಥೀಯ ವ್ಯಕ್ತಿಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸದೆ ಮುಸ್ಲಿಂ ವಿರೋಧಿ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಲೇ ಇರುತ್ತಾರೆ” ಎಂದು ಕಮೆಂಟ್ ಮಾಡಿದ್ದಾರೆ.

ಎನ್ ಅಮಾನ್ @airveteran1 ಎನ್ನುವ ಬಳಕೆದಾರರು ನಿಮ್ಮ ನಿಜವಾದ ಮನೆ ಇರುವುದು ಜೈಲಿನಲ್ಲಿ ಎಂದು ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ಡಿಜಿಪಿ ಕರ್ನಾಟಕ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.

ವಿಲಿಯಂ ಡಿಸೋಝಾ @DsouzaWil ಎನ್ನುವ ಬಳಕೆದಾರರು ಆಸ್ಪತ್ರೆಯಲ್ಲಿ ರಕ್ತ ಬೇಕಾದಾಗ ಯಾವ ಐಡಿಯಾ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಸತ್ಯ ಹೊಳ್ಳ @satyaNholla ಎಂಬ ಬಳಕೆದಾರರು ಬಾಯಲ್ಲಿ ಹೇಳೋದು 'ಸರ್ವೆಜನಾ ಸುಖಿನೋಭವಂತು'. ಆದ್ರೆ ದಿನ ಬೆಳಗಾದ್ರೆ ಮಾಡೋದು ಒಂದು ವರ್ಗದ ದ್ವೇಷ. ಇದು ಹೊಸ ಭಾರತ ಎಂದು ಕಮೆಂಟ್ ಮಾಡಿದ್ದಾರೆ.

ಹರೀಶ್ @harish6695 ಎಂಬ ಬಳಕೆದಾರರು ಮುಂದಿನ ಬಾರಿ ಪೆಟ್ರೋಲ್ ಹಾಕಿಸುವಾಗ ಅದು ಯಾವ ದೇಶದಿಂದ ಆಮದು ಆಗುತ್ತದೆ ಅಂತ ಗೊತ್ತು ಮಾಡಿಕೊಂಡು ಪೆಟ್ರೋಲ್ ಹಾಕಿಸು, ಅಕಸ್ಮಾತ್ ಅರಬ್ ರಾಷ್ಟ್ರ ಅಂತ ಗೊತ್ತಾದರೆ ಪೆಟ್ರೋಲ್ ಹಾಕಿಸಬೇಡ ಅಂಗೇ ತಳ್ಳಿಕೊಂಡು ಓಡಾಡು ಎಂದು ಸಲಹೆ ನೀಡಿದ್ದಾರೆ.

ಮಂಡ್ಯ ಮಂಜು @iammnmanju ಎನ್ನುವ ಬಳಕೆದಾರರು ಈ ಟ್ವೀಟ್ ಬಹಳಷ್ಟು ಜನರ ಕು.. ಸುಟ್ಟಿದೆ... ಒಬ್ಬ ವ್ಯಕ್ತಿ ತನ್ನ ಅಭಿಪ್ರಾಯವನ್ನು ಏಕೆ ಹೇಳಬಾರದು? ಎಂದು ಪ್ರಶ್ನಿಸಿದ್ದಾರೆ.

ಒರಿ @Ori10958675 ಎನ್ನುವ ಬಳಕೆದಾರರು ಮೇಲಿನ ಟ್ವೀಟ್ ನಲ್ಲಿ ನನಗೆ ಏನೂ ತಪ್ಪಿಲ್ಲ. ಇಲ್ಲಿ ಎಲ್ಲರೂ ದ್ವೇಷದ ಕಾಮೆಂಟ್ಗಳನ್ನು ಏಕೆ ಹಾಕುತ್ತಿದ್ದಾರೆ?

ಧನ್ಯವಾದಗಳು @ವಿಶ್ವಾಸ್ ಎಂಪಿವಿ. ನಾವು ನಮ್ಮ ಪ್ರಜೆಗಳನ್ನು ನೆನಪಿಸುತ್ತಲೇ ಇರಬೇಕು ಎಂದು ಕಮೆಂಟ್ ಮಾಡಿದ್ದಾರೆ.

ನಿವೀ @ nivs29_panda ಎನ್ನುವ ಬಳಕೆದಾರರು ನಾನು ಎಲ್ಲಿ ಹೋದರು ಇದನ್ನೇ ಮಾಡುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News