ಅ.13: ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಣೆ
Update: 2023-10-10 14:09 GMT
ಮೈಸೂರು,ಅ.10: ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಿಸಿ ಮೈಸೂರು ಪೊಲೀಸ್ ಆಯುಕ್ತ ಬಿ.ರಮೇಶ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅ. 13ರಂದು ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ಅನುಮತಿ ಕೋರಿತ್ತು. ಮತ್ತೊಂದು ಕಡೆ ಚಲೋ-ಚಾಮುಂಡಿ ಬೆಟ್ಟ ಕಾರ್ಯಕ್ರಮಕ್ಕೆ ಬಿಜೆಪಿ ನಗರ ಸಮಿತಿ ಅನುಮತಿ ಕೋರಿತ್ತು.
ʼʼಮೇಲ್ಕಂಡ ಎರಡೂ ಕಾರ್ಯಕ್ರಮಗಳಗೆ ಅನುಮತಿ ನೀಡಿದಲ್ಲಿ ಮೈಸೂರು ನಗರದ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಇರುವುದರಿಂದ ಎರಡು ಕಾರ್ಯಕ್ರಮಗಳಿಗೆ ಪೊಲೀಸ್ ಅನುಮತಿಯನ್ನು ನಿರಾಕರಣೆ ಮಾಡಲಾಗಿದೆʼʼ ಎಂದು ಮೈಸೂರು ನಗರ ಪೊಲೀಸ್ ಅಯುಕ್ತ ಬಿ.ರಮೇಶ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.