ರಾಜಕೀಯದಿಂದ ನಿವೃತ್ತಿ ಪಡೆಯಲಿ ಎಂದು ನನ್ನನ್ನು ಚನ್ನಪಟ್ಟಣ ಪ್ರಚಾರಕ್ಕೆ ಕರೆದಿಲ್ಲ : ಜಿ.ಟಿ.ದೇವೇಗೌಡ

Update: 2024-11-23 13:42 GMT

ಜಿ.ಟಿ.ದೇವೇಗೌಡ

ಮೈಸೂರು : "ನನಗೆ ವಯಸ್ಸಾಗಿದೆ. ನನ್ನ ಅವಶ್ಯಕತೆ ಇಲ್ಲ ಎಂಬ ಬಾವನೆ ಅವರಿಗಿರಬೇಕು, ರಾಜಕೀಯದಿಂದ ನಿವೃತ್ತಿ ಪಡೆಯಲಿ ಎಂದು ಚನ್ನಪಟ್ಟಣ ಉಪಚುನಾವಣೆಗೆ ನನ್ನನ್ನು ಆಹ್ವಾನಿಸಿಲ್ಲ" ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಚನ್ನಪಟ್ಟಣ ಉಪಚುನಾವಣೆಗೆ ನನ್ನನ್ನು ಯಾರೂ ಕರೆಯಲಿಲ್ಲ, ನಿಖಿಲ್, ಅವರ ತಾಯಿ, ದೊಡ್ಡವರು, ಕುಮಾರಸ್ವಾಮಿ ಯಾರೂ ಕರೆಯಲಿಲ್ಲ.‌ ಬಹುಶಃ ನನಗೆ ವಯಸ್ಸಾಗಿದೆ ಎಂದು ಅವರಿಗೆ ಅನಿಸಿರಬೇಕು, ನಾನು ಬೇಡ ಎಂಬ ಬಾವನೆ ಅವರಿಗೆ ಇರಬೇಕು. ರಾಜಕೀಯದಿಂದ ನಿವೃತ್ತಿಯಾಗಲಿ ಎಂದು ನನ್ನ ಯಾವುದಕ್ಕೂ ಕರೆಯುತ್ತಿಲ್ಲ" ಎಂದು ಹೇಳಿದರು.

ʼಕುಮಾರಸ್ವಾಮಿ ಅವರಿಗೆ ಗೊತ್ತು ಕಾಂಗ್ರೆಸ್‌ನಲ್ಲಿ ಹೌಸ್‌ಫುಲ್ ಆಗಿದೆ. ಬಿಜೆಪಿ ಜೊತೆ ಜೆಡಿಎಸ್ ಒಂದಾಗಿದೆ.‌ ಎಲ್ಲೂ ಹೋಗಲು ಆಗಲ್ಲ. ಹಾಗಾಗಿ ಇವನ ಅವಶ್ಯಕತೆ ಇಲ್ಲ ಎಂದೆನಿಸಿರಬೇಕು. ಇಷ್ಟು ವರ್ಷ ದುಡಿದ ನನಗೆ ಇದೇ ರೀತಿ ತಾನೆ ಕುಮಾರಸ್ವಾಮಿ ಮಾಡಿರುವುದುʼ ಎಂದು ಅಮಾಧಾನ ಹೊರಹಾಕಿದರು.

ʼಚನ್ನಪಟ್ಟಣದಲ್ಲಿ ನಿಖಿಲ್ ಸೋಲಬಾರದಿತ್ತು. ಎಲ್ಲಾ ಚೆನ್ನಾಗಿದೆ ಗೆಲುವು ಸಾಧಿಸುತ್ತಾರೆ ಎಂಬ ಮಾಹಿತಿ ಇತ್ತು. ಯಾಕೆ ಹೀಗೆ ಆಯಿತು ಎಂದು ಗೊತ್ತಿಲ್ಲ. ಅದರ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News