ಬೆಂಗಳೂರು | ಆನ್‍ಲೈನ್ ವಂಚನೆ: 12,615 ಪ್ರಕರಣ ದಾಖಲು, 201 ಕೋಟಿ ರೂ. ಜಪ್ತಿ

Update: 2023-10-10 18:23 GMT

ಬೆಂಗಳೂರು, ಅ. 10: ನಗರದಲ್ಲಿ ಸೈಬರ್ ಕ್ರೈಂ ಸಂಬಂಧಿಸಿದಂತೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ ವಂಚನೆಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ, ಇನ್ನಾದರೂ ಜನರು ಎಚ್ಚೆತ್ತು ವಂಚಕರ ಮಾತಿಗೆ ಬಲಿಯಾಗದಿರಿ ಎಂದು ಬೆಂಗಳೂರು ನಗರ ಪೊಲಿಸ್ ಆಯುಕ್ತ ಬಿ.ದಯಾನಂದ ಮನವಿ ಮಾಡಿದ್ದಾರೆ.

ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ನಾವು ಸಾಮಾಜಿಕ ಜಾಲತಾಣ ಸೇರಿ ಬೇರೆ ಬೇರೆ ವೇದಿಕೆ ಮೂಲಕ ಜಾಗೃತಿ ಮೂಡಿಸಲಾಗಿದೆ. ಇಷ್ಟಾದರೂ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ಬರುತ್ತಿವೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇನ್ನು ಮುಂದಿನ ದಿನಗಳಲ್ಲಾದರೂ ಸಾರ್ವಜನಿಕರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ ಇತರ ದಾಖಲೆಗಳನ್ನು ಯಾರಿಗೂ ನೀಡದಿರಿ ಎಂದು ಸಲಹೆ ನೀಡಿದರು.

ಈಗಾಗಲೇ ಆನ್‍ಲೈನ್ ಕೆಲಸ, ವ್ಯಾಪಾರ ಅವಕಾಶ, ಸಾಲ, ಲೋಟರಿ, ಆನ್‍ಲೈನ್ ಆಟ ಹೀಗೆ ಒಟ್ಟು 18 ಸೈಬರ್ ಕ್ರೈಂಗೆ ಸಂಬಂಧಿಸಿದಂತೆ 12,615 ವಂಚನೆ ಪ್ರಕರಣ ದಾಖಲಾಗಿದೆ. ಈ ಪೈಕಿ 470 ಕೋಟಿ ರೂ. ವಂಚನೆಯಾಗಿದೆ. ಅದರಲ್ಲಿ 201ಕೋಟಿ ರೂ. ಆರೋಪಿಗಳ ಅಕೌಂಟ್‍ ನಿಂದ ಜಪ್ತಿ ಮಾಡಲಾಗಿದೆ. ಈ ಪೈಕಿ 28.40 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 27.68 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಹಿಂತಿರುಗಿಸಲಾಗಿದೆ ಎಂದು ಬಿ.ದಯಾನಂದ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News