ಸಚಿನ್ ಆತ್ಮಹತ್ಯೆಯನ್ನು ತಮ್ಮ ಟೂಲ್‍ಕಿಟ್ ಆಗಿ ಬಳಸಿಕೊಳ್ಳುತ್ತಿರುವ ಬಿಜೆಪಿ : ಕಾಂಗ್ರೆಸ್ ಟೀಕೆ
Update: 2025-01-05 14:37 GMT
ಬೆಂಗಳೂರು: ‘ಅಧಿಕಾರವಿದ್ದಷ್ಟೂ ದಿನ ಭ್ರಷ್ಟಾಚಾರದಲ್ಲೇ ಮುಳುಗೆದ್ದ, ಕೊವಿಡ್ ಸೋಂಕಿನ ಸಂಕಷ್ಟದ ದಿನಗಳಲ್ಲಿ ಹೆಣದ ಮೇಲೆ ಹಣ ಲೂಟಿ ಹೊಡೆದ ಬಿಜೆಪಿಗೆ ಹೆಣದ ಮೇಲೆ ರಾಜಕಾರಣ ಮಾಡುವ, ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಎಲ್ಲಿಲ್ಲದ ಆಸಕ್ತಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಆಧಾರವಿಲ್ಲದ ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವುದೇ ಬಿಜೆಪಿಯ ಬಂಡವಾಳ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯನ್ನು ಕೂಡ ತಮ್ಮ ಟೂಲ್‍ಕಿಟ್ ಆಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ಅಸಲಿಯತ್ತು ಪದೇ ಪದೇ ಬಯಲಾಗುತ್ತಲೇ ಇದೆʼ ಎಂದು ಟೀಕಿಸಿದೆ.