24 ರೂಪಾಯಿಯ ʼಭಾರತ್ ಅಕ್ಕಿʼ ಕೇವಲ ಚುನಾವಣಾ ಗಿಮಿಕ್ ಆಗಿ ಉಳಿಯಿತೇ? : ಕಾಂಗ್ರೆಸ್

Update: 2024-05-15 09:14 GMT

ಬೆಂಗಳೂರು : ಬಡವರ ಹೊಟ್ಟೆಗೆ ವಂಚಿಸುವುದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ. 18 ಮಿಲಿಯನ್ ಟನ್ ಅಕ್ಕಿ ಹುಳು ಹಿಡಿದರೂ ಪರವಾಗಿಲ್ಲ, ಬಡವರ ಹೊಟ್ಟೆಗೆ ಅನ್ನವಾಗಬಾರದು ಎನ್ನುವ ಕೇಂದ್ರ ಸರಕಾರದ ಧೂರ್ತತನಕ್ಕೆ ಜನತೆ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಮಂಗಳವಾರ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಸರಕಾರ ಕೆಜಿಗೆ 34 ರೂಪಾಯಿಯಂತೆ ಖರೀದಿಗೆ ಕೇಳಿದರೂ ಕೊಡಲೊಪ್ಪದ ಕೇಂದ್ರ ಸರಕಾರ ಈಗ ಗೋದಾಮುಗಳಲ್ಲಿ ದಾಸ್ತಾನಿರುವ ಅಕ್ಕಿಯನ್ನು ಖಾಲಿ ಮಾಡಲು ಪರದಾಡುತ್ತಿದೆ ಎಂದು ಟೀಕಿಸಿದೆ.

ಅಕ್ಕಿ ರಾಜಕೀಯ ಮಾಡಿದ ಕೇಂದ್ರ ಸರಕಾರಕ್ಕೆ ಕೆಲವು ಪ್ರಶ್ನೆಗಳು ;

1. 24 ರೂಪಾಯಿಯ ಭಾರತ್ ಅಕ್ಕಿ ಕೇವಲ ಚುನಾವಣಾ ಗಿಮಿಕ್ ಆಗಿ ಉಳಿಯಿತೇ?

2. ಖಾಸಗಿ ಕಂಪೆನಿಗಳೂ ಸಹ ಕೇಂದ್ರ ಆಹಾರ ನಿಗಮದ ಅಕ್ಕಿಯನ್ನು ಖರೀದಿಸಲು ಮುಂದಾಗಲಿಲ್ಲವೇ?

3. ಖಾಲಿ ಮಾಡಲಾಗದಷ್ಟು ಅಕ್ಕಿ ಇದ್ದರೂ ಕನ್ನಡಿಗರಿಗೆ ವಂಚಿಸಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಮ್ಮ ಸರಕಾರ ಕೆಜಿಗೆ 34 ರೂ.ಕೊಟ್ಟು ಖರೀದಿಸಿದ್ದಿದ್ದರೆ ಆಹಾರ ನಿಗಮಕ್ಕೆ ಲಾಭವಾಗುತ್ತಿತ್ತು, ಆ ಲಾಭವನ್ನು ತಪ್ಪಿಸಿ ನಷ್ಟಕ್ಕೆ ತಳ್ಳಿದ್ದೇಕೆ? ಕನ್ನಡಿಗರಿಗೆ ಅಕ್ಕಿ ನೀಡದೆ ದ್ರೋಹ ಮಾಡಿದಿರಲ್ಲ, ಕನ್ನಡಿಗರು ನಿಮಗೆ ಯಾವ ಜನ್ಮದ ಶತ್ರುಗಳು? ಎಂದು ಕಾಂಗ್ರೆಸ್ ಕಿಡಿಗಾರಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News