ದಾವಣಗೆರೆ: ʼಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ʼ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2023-08-16 04:48 GMT

ದಾವಣಗೆರೆ : ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ವತಿಯಿಂದ ನಗರದ ಮುಸ್ಲಿಂ ವಸತಿ ನಿಲಯದ ಅವರಣದಲ್ಲಿ ಏರ್ಪಡಿಸಿದ್ದ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರದಿಂದ ಆಚರಿಸಲಾಯಿತು.

ವಿಧಾನಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಉನ್ನತ ಹಂತ ತಲುಪಿದ ನಂತರ ಬಡವರಿಗೆ ಸಹಾಯ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಈ ವೇಳೆ ಮಾತನಾಡಿದ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ಅಡಳಿತಾಧಿಕಾರಿ ಮತ್ತು ಜಿಲ್ಲಾ ವಕ್ಪ್ ಅಧಿಕಾರಿ ಸೈಯದ್ ಮೊಅಜ್ಹಂ ಪಾಷ, ವಕ್ಪ್ ಸಂಸ್ಥೆಯ ಶೇ 30 ರಷ್ಟು ಅದಾಯವನ್ನು ವಿದ್ಯಾರ್ಥಿ ವೇತನ, ವೈದ್ಯಕೀಯ ಚಿಕಿತ್ಸೆಗೆ, ವಿವಾಹ ಸೇರಿದಂತೆ ಇತರೆ ಭತ್ಯೆ ನೀಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಬಾರಿ 13 ವಿದ್ಯಾರ್ಥಿಗಳಿಗೆ 1.16.500 ವಿತರಿಸಲಾಗಿದೆ ಎಂದು ಹೇಳಿದರು.

ಈ ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಸಿರಾಜ್, ಉಪಾಧ್ಯಕ್ಷರಾದ ಶಾಮೀರ್ ಆಲಂಖಾನ್ ಖಲೀಲ್ ಆಹಮದ್, ಸದಸ್ಯರಾದ ಮುಬೀನ್ ಖಾನ್, ಅಬುಸ್ವಾಲೇಹ, ಮೊಯಿನ್ ಖಾನ್, ವಕ್ಪ್ ನಿರೀಕ್ಷಕ ಜಾಕೀರ ಹುಸೇನ್ ಸೇರಿದಂತೆ ಇತರರು ಇದ್ದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News