ದೇವನಹಳ್ಳಿ ವಿಮಾನ ನಿಲ್ದಾಣ: ಪ್ರಯಾಣಿಕನ ಬ್ಯಾಗ್‍ ನಲ್ಲಿತ್ತು ಜೀವಂತ ಹಾವುಗಳು ಸಹಿತ 78 ಪ್ರಾಣಿಗಳು!

Update: 2023-09-07 19:04 GMT

Photo- ANI

ಬೆಂಗಳೂರು, ಸೆ.​​ 7: 78 ಪ್ರಾಣಿಗಳನ್ನು ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು  ವಶಕ್ಕೆ ಪಡೆದಿರುವುದು ಗುರುವಾರ ವರದಿಯಾಗಿದೆ. 

ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರಯಾಣಿಕನನ್ನು ತಡೆಹಿಡಿದು ಬ್ಯಾಗ್‍ ಅನ್ನು ಪರಿಶೀಲನೆ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ. 

ಬ್ಯಾಂಕಾಕ್​ನಿಂದ ಏರ್ ಏಷ್ಯಾ FD 137 ವಿಮಾನದಲ್ಲಿ ಬಂದಿದ್ದ ವ್ಯಕ್ತಿಯ ಬ್ಯಾಗ್​ನಲ್ಲಿ ಜೀವಂತ 55 ಹೆಬ್ಬಾವು ಮರಿಗಳು, 17 ಕಾಳಿಂಗಸರ್ಪದ ಮರಿಗಳು ಮತ್ತು ಸತ್ತ 6 ಕಪ್ಪುಚುನ್ ಕೋತಿ ಮರಿಗಳ ಕಳೇಬರ ಪತ್ತೆ ಆಗಿದ್ದು, ಪ್ರಾಣಿಗಳ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಪ್ರಾಣಿಗಳ ಅಕ್ರಮ ಸಾಗಾಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ. ಸದ್ಯ ಪ್ರಾಣಿಗಳನ್ನ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇವುಗಳನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು' ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News