ಶಿರೂರು ಭೂಕುಸಿತ| ನದಿಯಲ್ಲಿ ಪತ್ತೆಯಾದ ಮೃತದೇಹ ಚಾಲಕ ಅರ್ಜುನ್‌ದೆಂದು ದೃಢಪಡಿಸಿದ ಡಿಎನ್‌ಎ ಪರೀಕ್ಷೆ

Update: 2024-09-27 11:29 GMT

ಅಂಕೋಲಾ: ಗಂಗಾವಳಿ ನದಿಯಲ್ಲಿ ಪತ್ತೆಯಾಗಿರುವ ಮೃತದೇಹದ ಅವಶೇಷಗಳು ಶಿರೂರು ಭೂಕುಸಿತದ ಸಂದರ್ಭದಲ್ಲಿ ಕಾಣೆಯಾಗಿದ್ದ ಕೇರಳ ಚಾಲಕ ಅರ್ಜುನ್‌ದೆಂದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

ಕರ್ನಾಟಕ ಗೋವಾ ಗಡಿಯಲ್ಲಿನ ಕನ್ಯಾಕುಮಾರಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಜುಲೈ 16ರಂದು ಲಾರಿ ಚಲಾಯಿಸುತ್ತಿದ್ದ ಕೇರಳದ ಕೋಯಿಕ್ಕೋಡ್‌ನ ಕನ್ನಡಿಕಲ್ ನಿವಾಸಿ ಶಿರೂರು ಭೂಕುಸಿತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ಕಳೆದ 71 ದಿನಗಳಿಂದ ನಾಪತ್ತೆಯಾಗಿದ್ದ ಲಾರಿಯನ್ನು ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿತ್ತು. ಈ ಸಂದರ್ಭದಲ್ಲಿ ಲಾರಿಯ ಕ್ಯಾಬಿನ್‌ನಲ್ಲಿ ಮೃತದೇಹವೊಂದು ಕಂಡು ಬಂದಿತ್ತು. ಇದೀಗ ಡಿಎನ್‌ಎ ವಿಧಿ ವಿಜ್ಞಾನ ಪರೀಕ್ಷಾ ವರದಿಯು ಆ ಮೃತದೇಹ ಚಾಲಕ ಅರ್ಜುನ್‌ದೆಂದು ದೃಢಪಡಿಸಿದೆ.

ತಿಂಗಳ ಕಾಲ ನಡೆದ ಈ ಶೋಧ ಕಾರ್ಯಾಚರಣೆಯು ಪ್ರತಿಕೂಲ ಹವಾಮಾನದ ಕಾರಣ ಕೆಲ ದಿನಗಳ ಕಾಲ ಸ್ಥಗಿತಗೊಂಡಿತ್ತು. ಮತ್ತೆ ಈ ತಿಂಗಳ ಆರಂಭದಲ್ಲಿ ಪುನಾರಂಭಗೊಂಡ ಶೋಧ ಕಾರ್ಯಾಚರಣೆಯಲ್ಲಿ ಲಾರಿ ಹಾಗೂ ಲಾರಿ ಕ್ಯಾಬಿನ್‌ನಲ್ಲಿ ಮೃತದೇಹವೊಂದನ್ನು ಪತ್ತೆ ಹಚ್ಚಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News