ಶರಣಾಗತ ನಕ್ಸಲರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಬದ್ಧ : ಡಾ.ಶಾಲಿನಿ ರಜನೀಶ್

Update: 2024-09-24 16:43 GMT

ಬೆಂಗಳೂರು: ‘ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ನಕ್ಸಲರಿಗೆ ಪುನರ್ವಸತಿ, ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಬದ್ಧರಿದ್ದೇವೆ’ ಎಂದು ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ನಡೆದ ‘ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ’ ರಾಜ್ಯ ಮಟ್ಟದ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ‘ಸಮಿತಿ ಹೊಸ ನಿಯಮದ ಪ್ರಕಾರ ಶರಣಾಗತರಿಗೆ ಸಹಾಯಧನ ನೀಡಲಾಗುವುದು. ಅವರ ಕುಟುಂಬದೊಂದಿಗೆ ಜೀವನ ನಡೆಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದರು.

ಶರಣಾಗತರಿಗೆ ಬದುಕು ನಡೆಸಲು ಭೂಮಿಯನ್ನು ನೀಡುವ ಸಂಬಂಧ ಪರಿಶೀಲಿಸಿ ಆಧ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದ ಡಾ.ಶಾಲಿನಿ ರಜನೀಶ್, ಬಂಧನದಲ್ಲಿರುವ ಶರಣಾಗತರು ಜಾಮೀನಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಲು ಸೂಚಿಸಿದರು.

ಸಭೆಯಲ್ಲಿ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು, ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶಕರು, ಪೊಲೀಸ್ ಮಹಾ ನಿರ್ದೇಶಕರು, ಸಮಿತಿ ಸದಸ್ಯರಾದ ಸಾಮಾಜಿಕ ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್, ಹಿರಿಯ ಪತ್ರಕರ್ತ ಬಿ.ಪಾರ್ವತೀಶ, ಹಿರಿಯ ವಕೀಲ ಕೆ.ಪಿ.ಶ್ರೀಪಾಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News