ಪ್ರತಿಯೊಬ್ಬರ ಬಾಲ್ಯದ ಸ್ನೇಹಿತ ‘ರೆನಾಲ್ಡ್ಸ್’ ಪೆನ್‌ ಗೆ ವಿದಾಯ

Update: 2023-08-25 13:22 GMT

Photo: twitter \ @DealsDhamaka

ಬೆಂಗಳೂರು,ಆ.25: ಪ್ರತಿಯೊಬ್ಬರ ಬಾಲ್ಯದ ನೆಚ್ಚಿನ ಸ್ನೇಹಿತ ‘ರೆನಾಲ್ಡ್ಸ್’ ಪೆನ್‌ಗೆ ಭಾರವಾದ ಹೃದಯದಿಂದ ವಿದಾಯ ಹೇಳಬೇಕಿದೆ. ಜಗತ್ತು ಕುದುರೆ ಗಾಡಿಗಳಿಂದ ರಾಕೆಟ್‌ಗಳಿಗೆ ಪರಿವರ್ತನೆಯಾಗಿದ್ದಕ್ಕೆ ಸಾಕ್ಷಿಯಾಗಿರುವ ಕೋಕಾ-ಕೋಲಾ ಮತ್ತು ಫೋರ್ಡ್‌ನಂತಹ ಬ್ರ್ಯಾಂಡ್‌ಗಳನ್ನು ಹಾಡಿ ಹೊಗಳುವವರು ಸಾಕಷ್ಟು ಜನರಿದ್ದಾರೆ, ಆದರೆ ನಾನು ಹೆಚ್ಚು ಸದ್ದಿಲ್ಲದೆ ಮಾರುಕಟ್ಟೆಯಿಂದ ತಣ್ಣಗೆ ನಿರ್ಗಮಿಸುವ ಸಾಯುತ್ತಿರುವ ಬ್ರ್ಯಾಂಡ್‌ಗಳಿಗೆ ಗೌರವ ಸಲ್ಲಿಸುವವರ ವರ್ಗಕ್ಕೆ ಸೇರಿದ್ದೇನೆ. ಅದು ರವಲಗಾಂವ್ ಅಥವಾ ನ್ಯೂಟ್ರಿನ್‌ನಂತಹ ಬ್ರ್ಯಾಂಡ್‌ಗಳು ಅಥವಾ ಚೆಲ್‌ಪಾರ್ಕ್ ಇಂಕ್‌ಪೆನ್‌ಗಳ ಕ್ರಮೇಣ ಕಣ್ಮರೆ ಆಗಿರಲಿ, ಬ್ರ್ಯಾಂಡ್‌ಗಳ ವೈಭವ ಮತ್ತು ಅವುಗಳ ಸಾವು ನನ್ನನ್ನು ಆಕರ್ಷಿಸುತ್ತವೆ.

ವಾಸ್ತವದಲ್ಲಿ ರೆನಾಲ್ಡ್ಸ್ ತನ್ನ ಕಾರ್ಯಾಚರಣೆಯನ್ನು ಅಮೆರಿಕದಲ್ಲಿ ಆರಂಭಿಸಿತ್ತು ಎನ್ನುವುದು ಗೊತ್ತಾದರೆ ಅನೇಕರು ಅಚ್ಚರಿ ಪಡುವುದು ಖಂಡಿತ. ರೆನಾಲ್ಡ್ಸ್ ಪೆನ್ ಮೇಲಿದ್ದ ‘045’ ಏನು ಎನ್ನುವುದು ಈ ಪೆನ್ ಅನ್ನು ಬಳಸಿದವರಿಗೂ ತಿಳಿದಿರಲಿಕ್ಕಿಲ್ಲ, ಅದು 1945ನ್ನು ಸೂಚಿಸುತ್ತದೆ. ಆ ವರ್ಷ ಕಂಪನಿಯು ಅಮೆರಿವನ್ನು ಬಿರುಗಾಳಿಯಂತೆ ಆವರಿಸಿಕೊಂಡಿತ್ತು. ಕ್ರಮೇಣ ಭಾರತಕ್ಕೆ ಕಾಲಿರಿಸಿದ ರೆನಾಲ್ಡ್ಸ್ ಇಲ್ಲಿ ಒಂದು ಐಕಾನ್ ಆಗಿತ್ತು. ರೆನಾಲ್ಡ್ಸ್ ಭಾರತದಲ್ಲಿ ಆರಂಭವಾಗಿರದೇ ಇರಬಹುದು, ಆದರೆ ಅದು ಪರಿಪೂರ್ಣವಾಗಿ ಭಾರತೀಯ ಕಂಪನಿಯಾಗಿತ್ತು. ದಶಕಗಳ ಕಾಲ ಅದು ಭಾರತೀಯ ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯ ಭಾಗವಾಗಿತ್ತು.

ರೆನಾಲ್ಡ್ಸ್‌ಗೆ ಪ್ರತಿಸ್ಪರ್ಧಿಗಳು ಇದ್ದವಾದರೂ ಅವು ನಿರಂತರವಾಗಿ ಸೋರಿಕೆಯಾಗುತ್ತಿದ್ದವು ಮತ್ತು ನಮ್ಮ ಜೇಬುಗಳಿಗೆ ನೀಲಿ ಬಣ್ಣವನ್ನು ಹರಡುತ್ತಿದ್ದವು, ಹೀಗಾಗಿ ಅವುಗಳ ಬಳಕೆ ಕಷ್ಟವಾಗಿತ್ತು. ಪಾರ್ಕರ್, ಪೈಲಟ್ ಮತ್ತು ಮಿಟ್ಸುಬಿಷಿಯಂತಹ ದುಬಾರಿ ಪೆನ್‌ಗಳೂ ಇದ್ದವು, ಆದರೆ ಈ ಐಷಾರಾಮಿ ಪೆನ್ನುಗಳಿಗೆ ಭಾರತಿಯ ಶಿಕ್ಷಣ ವ್ಯವಸ್ಥೆ ಹೊರೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಭಾರತೀಯ ಶಿಕ್ಷಣ ವ್ಯವಸ್ಥೆಗೆ ವಿಶಿಷ್ಟ ಬರವಣಿಗೆ ಅಗತ್ಯವಿದ್ದು ಅದನ್ನು ಸಾಮಾನ್ಯ ಪೆನ್ನುಗಳು ಪೂರೈಸಲು ಸಾಧ್ಯವಿಲ್ಲ. ನೀವು ಪ್ರತಿ ದಿನ,ಎಲ್ಲ ಸಮಯದಲ್ಲಿಯೂ ಬರೆಯುತ್ತಿದ್ದಿರಿ. ತರಗತಿಗಳಲ್ಲಿ ಟಿಪ್ಪಣಿಗಳು, ಹೋಮವರ್ಕ್, ಅಸೈನ್‌ಮೆಂಟ್ ಮತ್ತು ಪರೀಕ್ಷೆ ಈ ಎಲ್ಲದರಲ್ಲಿಯೂ ನೀವು ಬರೆಯುತ್ತಿದ್ದಿರಿ. ಇಷ್ಟು ಮಾತ್ರವಲ್ಲ,ಪತ್ರಗಳು, ಅರ್ಜಿಗಳನ್ನೂ ಗೀಚುತ್ತಿದ್ದಿರಿ. ಈ ಎಲ್ಲದರಲ್ಲಿಯೂ ರೆನಾಲ್ಡ್ಸ್ ಪೆನ್ ನಮ್ಮ ಜೇಬಿಗೆ ಭಾರವಾಗದೆ ಗುಣಮಟ್ಟದ ಕಾರ್ಯ ನಿರ್ವಹಿಸುತ್ತಿತ್ತು.

ಈಗ ಹುಡುಕಾಡಿದರೂ ಮಾರುಕಟ್ಟೆಯಲ್ಲಿ ರೆನಾಲ್ಡ್ಸ್ ಪೆನ್ ಸಿಗುತ್ತಿಲ್ಲ. ತನ್ನೊಂದಿಗಿನ ನಮ್ಮ ಬಾಲ್ಯದ ನೆನಪುಗಳನ್ನು ಬಿಟ್ಟು ಸದ್ದಿಲ್ಲದೆ ನಿರ್ಗಮಿಸಿದೆ. ವಿದಾಯ ಬಾಲ್ಯದ ಗೆಳೆಯ,ವಿದಾಯ.....

ಹೃದಯ ರಂಜನ್ - newindianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Contributor - ಹೃದಯ ರಂಜನ್ - newindianexpress.com

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!