ರಾಜ್ಯದ ಮತದಾರರ ಅಂತಿಮ ಪಟ್ಟಿ ಪ್ರಕಟ

Update: 2024-01-22 08:12 GMT

ಬೆಂಗಳೂರು: ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ-2024 ಬಿಡುಗಡೆಯಾಗಿದ್ದು, 17,937 ಶತಯುಷಿಗಳು(ನೂರು ವರ್ಷ ತುಂಬಿರುವ) ಸೇರಿದಂತೆ ಬರೋಬ್ಬರಿ 5.37 ಕೋಟಿ ಮತದಾರರು ಇದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

ನಗರದದ ಶೇಷಾದ್ರಿ ರಸ್ತೆಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಕರಡು ಮತದಾರರ ಪಟ್ಟಿ -2024 ರ ಪ್ರಕಾರ, ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,33,77,162 ಆಗಿದ್ದು, ಇದರಲ್ಲಿ 2,68,02,838 ಪುರುಷ ಮತದಾರರು, 2,65,69,428 ಮಹಿಳಾ ಮತದಾರರು ಮತ್ತು 4,896 ಇತರೆ ಮತದಾರರು ಸೇರಿದ್ದಾರೆ.

ಆದರೆ, ಅಂತಿಮ ಮತದಾರರ ಪಟ್ಟಿ-2024 ರಲ್ಲಿ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,37,85,815 ಹೆಚ್ಚಳವಾಗಿದ್ದು, ಇದರಲ್ಲಿ 2,69,33,750 ಪುರುಷ ಮತದಾರರು, 2,68,47,145 ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರು ಸೇರಿದ್ದಾರೆ ಎಂದು ಅವರು ವಿವರಿಸಿದರು.

ಕರಡು ಪಟ್ಟಿಗೆ ಹೋಲಿಸಿದರೆ ಒಟ್ಟು ಮತದಾರರಲ್ಲಿ ನಿವ್ವಳ ಹೆಚ್ಚಳವು 4,08,653 ಆಗಿದ್ದು, ಈ ಪೈಕಿ ಮಹಿಳಾ ಮತದಾರರಲ್ಲಿ ಗಮನಾರ್ಹವಾಗಿ 2,77,717 ರಷ್ಟು ಮತದಾರರು ಸಂಖ್ಯೆ ಹೆಚ್ಚಳವಾಗಿದ್ದು, ಪುರುಷ ಮತದಾರರಲ್ಲಿ 1,30,912 ಮತ್ತು ಇತರೆ ಮತದಾರರಲ್ಲಿ 24 ಮತದಾರರ ಸಂಖ್ಯೆ ಹೆಚ್ಚಳವಾಗಿರುತ್ತದೆ ಎಂದರು.

224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಅಂದರೆ 7,17,201 ಮತದಾರರನ್ನು ಹೊಂದಿದೆ. ವ್ಯತಿರಿಕ್ತವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 1,67,556 ಮತದಾರರಿದ್ದಾರೆ ಎಂದು ಅವರು ಉಲ್ಲೇಖಿಸಿದರು.

► ಒಟ್ಟು ಮತದಾರರು-5,37,85,815

► ಪುರುಷರು-2,69,33,750

►  ಮಹಿಳೆಯರು- 2,68,47,145

► ಇತರೆ-4,920

► ಸೇವಾ ಮತದಾರರು-46,501

► ಯುವ ಮತದಾರರು-3,88,527

► ವಿದೇಶದಲ್ಲಿರುವ ಮತದಾರರು-3,164

► 80 ವರ್ಷ ದಾಟಿರುವ ಮತದಾರರು-12,71,862

► ಶತಯುಷಿ(ನೂರು ವರ್ಷ ತುಂಬಿರುವ)ಮತದಾರರು-17,937

► ವಿಕಲಚೇತನ ಮತದಾರರು-5,62,890

► ಮತದಾನ ಕೇಂದ್ರಗಳು-58,834

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News