ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಸ್ಐಟಿಗೆ ವಹಿಸುವಂತೆ ಬಿಜೆಪಿಯಿಂದ ಪ್ರತಿಭಟನೆ

Update: 2024-01-20 15:13 GMT

ಹಾವೇರಿ:ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರದ ತನಿಖೆಯನ್ನು ಎಸ್ಐಟಿಗೆ ಒಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಹಾವೇರಿ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ಬದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಜಂಗಲ್ ರಾಜ್ ಇದೆ, ತುಗಲಕ್ ದರ್ಬಾರ್ ಇದೆ. ತಾಲಿಬಾನ್ ಶಕ್ತಿಗಳು ತಲೆ ಎತ್ತುತ್ತಿವೆ. ಅತ್ಯಾಚಾರ ಆದ ನಾಲ್ಕು ದಿನದ ಬಳಿಕ ಕೇಸ್ ಮಾಡಿದ್ದಾರೆ. ಹಾನಗಲ್ ಪೊಲೀಸರು ಕೇಸ್ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ದುಷ್ಟರ ಜೊತೆಗೆ ಪೊಲೀಸರು ಸೇರಿದ್ದಾರೆ ಎಂದು ಆರೋಪಿಸಿದರು.

ಹಾನಗಲ್ ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲಿಸರ‌ ಮೂಲಕ ಸಂತ್ರಸ್ಥೆಗೆ ಆಮಿಷವೊಡ್ಡಿದ್ದರು. ಪಿಎಸ್ಐ ಎಲ್ಲ ವ್ಯವಹಾರ ಮಾಡಿದ್ದು, ಪಿಎಸ್ ಐ ಅವರನ್ನು ಸಸ್ಪೆಂಡ್ ಮಾಡಲಿಲ್ಲ. ಅಮಾಯಕರನ್ನು ಬಂಧಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ನಂಬರ್ ತೋರಿಸುತ್ತಿದ್ದಾರೆ. ಅಲ್ಪಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಈಗ ಅಲ್ಪ ಸಂಖ್ಯಾತರ ರಕ್ಷಣೆ ಮಾಡಿ ನೋಡೊಣ ಎಂದು ಸವಾಲು ಹಾಕಿದರು.

ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ

ಪೊಲೀಸರು ಗೂಂಡಾಗಳ ಜೊತೆ ಕೈಜೋಡಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲ. ಬ್ಯಾಡಗಿಯಲ್ಲಿ ನಿನ್ನೆ ಘಟನೆ ನಡೆದಿದೆ. ಹಾನಗಲ್ ನಲ್ಲಿ ಘಟನೆ ನಡೆದ ಮೇಲು ನಿನ್ನೆ ಬ್ಯಾಡಗಿಯಲ್ಲಿ ನಡೆದಿದೆ ಯಾಕೆ ? ಸಂತ್ರಸ್ತೆ ಮೇಲೆ ರೇಪ್ ಆದರೂ, ಕೇಸ್ ಹಾಕಲಿಲ್ಲ. ನಾನು ಎಸ್ಪಿಗೆ ಪೋನ್ ಮಾಡಿದ್ದೆ ರೇಪ್ ‌ಆಗಿಲ್ಲ. ಅಂತ ಹೇಳಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ಕೊಟ್ಟ ಮೇಲೆ ಕೇಸ್ ಆಯ್ತು. ಕೇಸ್ ಮಾಡದೆ ಇರಲು ಯಾವ ರಾಜಕೀಯ ಒತ್ತಡ ಇತ್ತು ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News