ಹಾಸನ ಪೆನ್‌ಡ್ರೈವ್‌ ಪ್ರಕರಣ ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಹಗರಣ : ಸಚಿವ ಕೃಷ್ಣಬೈರೇಗೌಡ

Update: 2024-04-28 13:43 IST
ಹಾಸನ ಪೆನ್‌ಡ್ರೈವ್‌ ಪ್ರಕರಣ ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಹಗರಣ : ಸಚಿವ ಕೃಷ್ಣಬೈರೇಗೌಡ
  • whatsapp icon

ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌  ಪ್ರಕರಣ ದೇಶದ ಇತಿಹಾಸದಲ್ಲಿಯೇ ದೊಡ್ಡ ಲೈಂಗಿಕ ಹಗರಣವಾಗಿದ್ದು, ನೂರಾರು ಹೆಚ್ಚು ಮಕ್ಕಳನ್ನು ಅತ್ಯಾಚಾರ ಮಾಡಿರುವುದು ಖಂಡನೀಯ. ಮಾಜಿ ಪ್ರಧಾನಿಗಳ ಮೊಮ್ಮಗ ಈ ರೀತಿ ಮಾಡಿರುವುದು ದೊಡ್ಡ ತಪ್ಪು ಎಂದು ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, " ಮಗ ಇಷ್ಟೆಲ್ಲ ಮಾಡಿದ್ರೂ ಅವರಿಗೆ ಗೊತ್ತೇ ಇಲ್ವಾ? ಅಥವಾ ಗೊತ್ತಿದ್ದರೂ ಈ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದರೇ? ಅವರ ತಾಯಿ, ತಂದೆ ಇದಕ್ಕೆಲ್ಲ ಉತ್ತರ ಕೊಡಬೇಕು. ಅವರ ಕುಟುಂಬಕ್ಕೆ ಅಧಿಕಾರ ಇದ್ದರೆ ಸಾಕು. ಅಪ್ಪನಿಗೆ PWD ಇಲಾಖೆಯೇ ಬೇಕು. ಚಿಕ್ಕಪ್ಪ, ಮಗ, ಅತ್ತೆ, ಸೊಸೆ ಎಲ್ಲರಿಗೂ ಅಧಿಕಾರ ಬೇಕು. ಕೂಡಲೇ ಈ ಬಗ್ಗೆ ತನಿಖೆ ಆಗಬೇಕು, ನಾವು ಉನ್ನತ ಮಟ್ಟದ ತನಿಖೆ ಮಾಡುತ್ತೇವೆ"  ಎಂದರು.

ಪ್ರಧಾನಿ ಮೋದಿ ಉತ್ತರ ಕೊಡಬೇಕು

ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಈಗ ದಾರಿ ತಪ್ಪಿದ್ದು ಯಾರು ಕುಮಾರಸ್ವಾಮಿಯವರೇ?. ನಿಮ್ಮ ಮನೆ ಮಗನೇ ದಾರಿ ತಪ್ಪಿದ್ದಾನೆ. ಈ ಬಗ್ಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಪ್ರಜ್ವಲ್ ರೇವಣ್ಣ ಎಷ್ಟು ಮಹಿಳೆಯರ ತಾಳಿ‌ ಕಿತ್ತಿದ್ದಾರೆ?. ಇವತ್ತು ರಾಜ್ಯಕ್ಕೆ ಮೋದಿ‌ ಬರುತ್ತಿದ್ದು, ಎಷ್ಟು‌ ಜನರ ತಾಳಿ‌ ಕಸಿದಿದ್ದಾರೆ ಎಂದು ಅವರೇ ಹೇಳಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News