ಎಸೆಸೆಲ್ಸಿ ಪರೀಕ್ಷೆ | ಬುಧವಾರ 18,554 ವಿದ್ಯಾರ್ಥಿಗಳು ಗೈರು: ಒಬ್ಬ ವಿದ್ಯಾರ್ಥಿ ಡಿಬಾರ್
Update: 2025-03-26 20:41 IST

ಸಾಂದರ್ಭಿಕ ಚಿತ್ರ | PC: pexels
ಬೆಂಗಳೂರು : ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಬುಧವಾರ ನಡೆದ ದ್ವಿತೀಯ ಭಾಷೆಗಳಾದ ಇಂಗ್ಲೀಷ್ ಮತ್ತು ಕನ್ನಡ ಭಾಷಾ ಪರೀಕ್ಷೆಗಳಲ್ಲಿ 18,554 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.
ಪರೀಕ್ಷೆಗೆ 8,44,937 ಮಂದಿ ನೋಂದಣಿ ಮಾಡಿಕೊಂಡಿದ್ದು, 8,26,383 ಪರೀಕ್ಷೆಯನ್ನು ಬರೆದಿದ್ದಾರೆ. ಕಲಬುರಗಿಯಲ್ಲಿ 2,252 ವಿದ್ಯಾರ್ಥಿಗಳು, ರಾಯಚೂರಿನಲ್ಲಿ 1,158 ಮಂದಿ, ಬೀದರ್‍ನಲ್ಲಿ 1,168 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಫೂಲ್ ಬನ್ ಉರ್ದು ಗರ್ಲ್ಸ್ ಹೈಸ್ಕೂಲ್‍ನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಉತ್ತರವನ್ನು ನಕಲು ಮಾಡಿದ್ದರಿಂದ, ಆ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.