ನಂಜನಗೂಡು | ಕೆರೆಯಲ್ಲಿ ಹಸುಗಳನ್ನು ತೊಳೆಯಲು ಹೋದ ಮೂವರು ನೀರುಪಾಲು

Update: 2025-03-29 14:14 IST
ನಂಜನಗೂಡು | ಕೆರೆಯಲ್ಲಿ ಹಸುಗಳನ್ನು ತೊಳೆಯಲು ಹೋದ ಮೂವರು ನೀರುಪಾಲು
  • whatsapp icon

ಮೈಸೂರು : ಯುಗಾದಿ ಹಬ್ಬ ಇದ್ದಿದ್ದರಿಂದ ಹಸುಗಳನ್ನು ತೊರೆಯಲು ಕೆರೆಗೆ ಹೋಗಿದ್ದ ಮೂವರು ನೀರು ಪಾಲಾದ ಘಟನೆ ನಂಜನಗೂಡು ತಾಲ್ಲೂಕಿನ ಕಾಮಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ವಿನೋದ್ (17), ಬಸವೇಗೌಡ (45), ಮತ್ತು ಮುದ್ದೇಗೌಡ (48) ಎಂದು ಗುರುತಿಸಲಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾಮಹಳ್ಳಿ ಗ್ರಾಮದ ಕೆರೆಯಲ್ಲಿ ಅದೇ ಗ್ರಾಮದ ಮುದ್ದೇಗೌಡ ಕುಟುಂಬ ಯುಗಾದಿ ಹಬ್ಬದ ಅಂಗವಾಗಿ ಮತ್ತು ಅಮವಾಸ್ಯೆ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗ ಹಸು ತೊಳೆಯಲು ಗ್ರಾಮದ ಬಳಿ ಇರುವ ಕೆರೆಗೆ ಹೊಗಿದ್ದಾರೆ. ಈ ವೇಳೆ ವಿನೋದ್ ಆಯಾತಪ್ಪಿ ಕರೆಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈ ವೇಳೆ ವಿನೋದ್ ನನ್ನು ಕಾಪಾಡಲು ಮಾಡಲು ಮುದ್ದೇಗೌಡ ಮತ್ತು ಬಸವೇಗೌಡ ಹೋಗಿದ್ದಾರೆ.‌ ಈ ವೇಳೆ ಅವರು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕೆರೆ ಬಳಿ ಜಮಾಯಿಸಿದ್ದಾರೆ. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

ವಿಷಯ ತಿಳಿದು ಅಗ್ನಿಶಾಮಕ ತಂಡ ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ಮುಳುಗಿರುವವರ ಮೃತದೇಹಗಳನ್ನು ಹೊರ ತೆಗೆಯಲು ಎರಡು ತಂಡಗಳು ಬೋಟ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸಂಬಂಧ ಬಿಳಿಗೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News