ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಚಿವ ಸತೀಶ್ ಜಾರಕಿಹೊಳಿ ಸಹಿತ ಮೂವರಿಗೆ ಗೌರವ ಡಾಕ್ಟರೇಟ್
Update: 2025-03-24 23:13 IST

ಡಾ.ದಾಕ್ಷಾಯಿಣಿ ಎಸ್.ಅಪ್ಪ/ಸತೀಶ್ ಜಾರಕಿ ಹೊಳಿ/ ಇರ್ಫಾನುಲ್ಲಾ ಷರೀಫ್
ಮೈಸೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹಿತ ಮೂವರು ಗಣ್ಯರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ತೀರ್ಮಾನಿಸಿದೆ.
ಸೋಮವಾರ ಈ ಕುರಿತು ರಾಜಭವನದ ಪ್ರಕಟನೆ ಹೊರಡಿಸಿದ್ದು, ಐಡಿಯಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಸಿ.ಎಂ.ಇರ್ಫಾನುಲ್ಲಾ ಷರೀಫ್ ಹಾಗೂ ಕಲಬುರಗಿ ಯ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರನ್ನು ವಿವಿಯ ಪ್ರತಿಷ್ಠಿತ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
ರಾಜ್ಯದ ರಾಜ್ಯಪಾಲ, ವಿವಿಯ ಕುಲಾಧಿಪತಿಯೂ ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಮೂವರಿಗೆ ಗೌರವ ಡಾಕ್ಟರೇಟ್‌ಗೆ ಅನುಮೋದನೆ ನೀಡಿದ್ದಾರೆ.ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ 20ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ಪ್ರಧಾನ ಮಾಡಲಾಗುವುದು ಎಂದು ವಿವಿಯ ಪ್ರಕಟನೆ ತಿಳಿಸಿದೆ.