ಪತ್ರಕರ್ತ ವೆಂಕಟೇಶ್ ಸಂಪ ಅವರಿಗೆ ʼಪಂಪ ಪ್ರಶಸ್ತಿʼ ಪ್ರದಾನ

ಮೈಸೂರು: ಅಕ್ಷರನಾದ ಕಲೆ-ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು (ರಿ) ಮತ್ತು ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಘಟಕ ನೀಡುವ 2025ನೇ ಸಾಲಿನ ʼಪಂಪ ರಾಜ್ಯ ಪ್ರಶಸ್ತಿʼಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ್ ಎಸ್ ಸಂಪ ಅವರಿಗೆ ಎ.12ರಂದು ಮೈಸೂರಿನ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಪ್ರದಾನ ಮಾಡಲಾಯಿತು.
ಖ್ಯಾತ ಕವಿ ಸಿಪಿಕೆ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಾಹಿತ್ಯ ಪರಿಷತ್ ಅಧ್ಯಕ್ಷ ವಡ್ಡಿಗೆರೆ ಗೋಪಾಲ್, ಡಾ.ತ್ಯಾಗರಾಜ್, ಶ್ರುತಿ ಮಧುಸೂದನ್, ನೀವಿಯ ಗೋಮ್ಸ್, ತಾರ ಸಂತೋಷ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ವೆಂಕಟೇಶ್ ಸಂಪ ಅವರು ಕಳೆದ 18 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು, ಅವರ ಕತೆ, ಕವನ, ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಪ ಅವರು ಟಿವಿ, ರೇಡಿಯೋಗಳಲ್ಲಿ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು, ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ರಕ್ತದಾನ, ನೇತ್ರದಾನ, ಪರಿಸರ ಜಾಗೃತಿ ಅಭಿಯಾನ, ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ಸಂಪ ಅವರು ತೊಡಗಿದ್ದಾರೆ. "ಸಂಪದ ಫೌಂಡೇಶನ್ ಫಾರ್ ಪಬ್ಲಿಕ್ ಅವೇರ್ನಸ್" ಸಂಸ್ಥೆ ಮೂಲಕ ಹಲವಾರು ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ವೆಂಕಟೇಶ್ ಸಂಪ ಅವರಿಗೆ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು ಎಂದು ಶ್ರುತಿ ಮಧುಸೂದನ್ ಅವರು ತಿಳಿಸಿದ್ದಾರೆ.