197 ಮಂದಿ ಹಿರಿಯ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ
Update: 2025-03-29 21:46 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯದ 197 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2024ನೆ ಸಾಲಿನ ಮುಖ್ಯಮಂತ್ರಿ ಪದಕಗಳನ್ನು ಪ್ರಕಟಿಸಲಾಗಿದೆ.
ಶನಿವಾರ ಈ ಸಂಬಂಧ ಒಳಾಡಳಿತ ಇಲಾಖೆ ಮುಖ್ಯ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕ ಸಿ.ಕೆ.ಬಾವಾ, ಸಿಐಡಿ ಅಧೀಕ್ಷಕ ಡಾ.ಅನೂಪ್ ಶೆಟ್ಟಿ, ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರವಿಂದ ಎನ್.ಕಲಗುಜ್ಜಿ, ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಂಶುಕುಮಾರ್.
ಬೆಂಗಳೂರು ನಗರದ ಕೆಜಿ ಹಳ್ಳಿ ಎಸಿಪಿ ಪ್ರಕಾಶ ರಾಠೋಡ, ವೈಟ್ ಫೀಲ್ಡ್ ಉಪ-ವಿಭಾಗದ ಎಸಿಪಿರೀನಾ ಸುವರ್ಣಾ, ಎಸಿಪಿ, ಮಂಗಳೂರು ಉಪ-ವಿಭಾಗದ ಧನ್ಯ ಎನ್.ನಾಯಕ, ಮೈಸೂರಿನ ದೇವರಾಜ ಉಪ-ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಗೋಪಿ ಬಿ.ಆರ್. ವಿಜಯನಗರ ಜಿಲ್ಲೆಯ ರಾಮನಗೌಡ ಎ.ಹಟ್ಟಿ ಸೇರಿದಂತೆ ಒಟ್ಟು 197 ಮಂದಿ ಸಿಎಂ ಪದಕಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.