ಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿ : ಸ್ಪೀಕರ್ ಯುಟಿ ಖಾದರ್

ಉಳ್ಳಾಲ: ಸೌಹಾರ್ದತೆ ಬೆಳೆಸುವುದೇ ಈದ್ ಹಬ್ಬದ ಮುಖ್ಯ ಗುರಿ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಈದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಯುಟಿ ಖಾದರ್, ಒಂದು ತಿಂಗಳ ಕಾಲ ಉಪವಾಸ ಹಿಡಿದು ಶಾಂತಿ ಸೌಹಾರ್ದತೆಯಿಂದ ಈದ್ ಉಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಸೌಹಾರ್ದತೆ ಬೆಳೆಸುವುದೇ ಈದ್ ಹಬ್ಬದ ಮುಖ್ಯ ಗುರಿ ಎಂದು ಹೇಳಿದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಇಸ್ಲಾಮಿನ ಕಡ್ಡಾಯ ಕರ್ಮವಾಗಿರುವ ಒಂದು ತಿಂಗಳ ಉಪವಾಸ ಮುಗಿಸಿ ಈದ್ ಉಲ್ ಫಿತ್ರ್ ಹಬ್ಬ ಆಚರಿಸಲಾಗುತ್ತದೆ. ಎಲ್ಲಾ ಧರ್ಮಗಳಲ್ಲಿ ಹಬ್ಬಗಳಿವೆ. ಶಾಂತಿ ಸೌಹಾರ್ದತೆ ಬೆಳೆಸುವುದೇ ಇವುಗಳ ಮೂಲ ಗುರಿ ಎಂದು ಹೇಳಿದರು.
ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಲ್ ಸುಹೈಲ್ ನೂರಾನಿ ಈದ್ ನಮಾಝ್ ಹಾಗೂ ಖುತುಬಾ ಪಾರಾಯಣದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಕೋಶಾಧಿಕಾರಿ ನಾಝೀಮ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
