ಆಹಾರ ಇಲಾಖೆ ಪರೀಕ್ಷೆ ವೇಳೆ ‘ಪನ್ನೀರ್‌ನ ಸ್ಯಾಂಪಲ್’ಗಳಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆ

Update: 2025-03-26 20:48 IST
ಆಹಾರ ಇಲಾಖೆ ಪರೀಕ್ಷೆ ವೇಳೆ ‘ಪನ್ನೀರ್‌ನ ಸ್ಯಾಂಪಲ್’ಗಳಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆ
ಸಾಂದರ್ಭಿಕ ಚಿತ್ರ | PC : Meta AI
  • whatsapp icon

ಬೆಂಗಳೂರು : ರಾಜ್ಯದ ವಿವಿಧ ಭಾಗಗಳಿಂದ ಪನ್ನೀರ್ ಆಹಾರ ಪದಾರ್ಥವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಎರಡು ಸ್ಯಾಂಪಲ್‍ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳಿವೆ. ಹೀಗಾಗಿ ಸೇವನೆ ಮಾಡಲು ಹಾನಿಕಾರಕವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ತಿಳಿಸಿದೆ.

ರಾಜ್ಯಾದ್ಯಂತ 231 ಪನ್ನೀರ್ ಸ್ಯಾಂಪಲ್ಸ್ ಅಧಿಕಾರಿಗಳು ಸಂಗ್ರಹ ಮಾಡಿದ್ದಾರೆ. ಅದರಲ್ಲಿ 16 ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದ್ದಾರೆ. 16 ಸ್ಯಾಂಪಲ್‍ಗಳಲ್ಲಿ 2 ವರದಿ ಬಂದಿದೆ. ಈ ಪನ್ನೀರ್ ಸ್ಯಾಂಪಲ್‍ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದ್ದು, ಸ್ಯಾಂಪಲ್‍ಗಳು ಹಾನಿಕಾರಕವಾಗಿದೆ. ಇನ್ನು ಉಳಿದ ಪನ್ನೀರ್ ಸ್ಯಾಂಪಲ್‍ಗಳ ಸಂಪೂರ್ಣ ವರದಿ ಬರಬೇಕಿದೆ ಎಂದು ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News