2028ರೊಳಗೆ ಜಿಲ್ಲೆಯ ಹೆಸರನ್ನು ಮತ್ತೆ ರಾಮನಗರ ಎಂದು ಮಾಡಲಾಗುವುದು : ಎಚ್.ಡಿ ಕುಮಾರಸ್ವಾಮಿ

Update: 2024-07-26 14:41 GMT

ಹೊಸದಿಲ್ಲಿ : ರಾಮನಗರದ ಇತಿಹಾಸ ಅವರಿಗೆ ಗೊತ್ತಿದ್ದರೆ ಜಿಲ್ಲೆಯ ಹೆಸರು ಬದಲಾಯಿಸುತ್ತಿರಲಿಲ್ಲ. ಸ್ವಲ್ವ ದಿನ ಅವರು ಖುಷಿಯಾಗಿರಲಿ. ಈಗಾಗಲೆ ಅವರ ರಾಜಕೀಯ ಪತನ ಆರಂಭವಾಗಿದೆ. ಹೆಸರು ಬದಲಾಯಿಸಲು ಯಾರಾದರೂ ಅರ್ಜಿ ಕೊಟ್ಟಿದ್ರಾ? ಹೆಸರು ಬದಲಾಯಿಸುವುದರಿಂದ ಏನು ಸಿಗುತ್ತದೆ. 2028ರೊಳಗೆ ಮತ್ತೆ ಜಿಲ್ಲೆಯ ಹೆಸರನ್ನು ರಾಮನಗರ ಎಂದು ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಈಗಾಗಲೇ ಅಭಿವೃದ್ಧಿ ಆಗಿದೆ. ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿ, ಭೂಮಿಯ ಬೆಲೆ ಹೆಚ್ಚಳ ಮಾಡಬೇಕಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿ ಮಾಡದೆ ಏನು ಅಭಿವೃದ್ಧಿ ಮಾಡಿದರೆ ಏನು ಪ್ರಯೋಜನ ಬರುತ್ತದೆ ಎಂದು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News