ಟೊಮೆಟೊ ಬೆಲೆ ಏರಿಕೆ: ಕಳ್ಳರಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲೇ ಬೀಡುಬಿಟ್ಟ ರೈತರು
Update: 2023-07-13 14:00 GMT
ದಾವಣಗೆರೆ: ಟೊಮೊಟೊ ಬೆಳೆಗೆ ಬಂಗಾರದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ರೈತರು ಸ್ವತಃ ಕುಟುಂಬದವರು ಜಮೀನು ಕಾಯುತ್ತಿದ್ದಾರೆ.
ಕಷ್ಟ ಪಟ್ಟು ಬೆಳೆದ ಇದೇ ಪ್ರಥಮ ಬಾರಿಗೆ ಒಳ್ಳೇಯ ಬೆಲೆ ಬಂದಿದೆ. ಅದರೆ, ಬೆಳೆಗೆ ಕಳ್ಳರ ಕಾಟ ಶುರವಾಗಿದೆ. ಇದರಿಂದ ಬೇಸತ್ತಿರುವ ರೈತರು ಕಳ್ಳತನ ತಡೆಯಲು ಜಮೀನು ಗಳಲ್ಲಿ ಸಾಕು ನಾಯಿಗಳೊಂದಿಗೆ ಸಣ್ಣ ಪ್ರಮಾಣದ ಟೆಂಟು, ಗುಡಿಸಲು ನಿರ್ಮಿಸಿ ದೊಣ್ಣೆ ,ಬ್ಯಾಟರಿ ಇಟ್ಟುಕೊಂಡು ಹಗಲು ರಾತ್ರಿ ಬೆಳೆಗೆ ಕಾವಲು ಹಾಕಿದ್ದಾರೆ.
ಕೊಡಗನೂರು ಗ್ರಾಮದಲ್ಲಿ 20 ರಿಂದ 30 ರೈತರು ಟೊಮೊಟೊ ಬೆಳೆ ಬೆಳೆದಿದ್ದಾರೆ. ಕೆಲವರು ಕಳ್ಳರ ಕಾಟಕ್ಕೆ ಟ್ರ್ಯಾಕ್ಟರ್ ಟ್ರ್ಯಾಲಿಗೆ ಟಾರ್ಪಾಲ್ ಹೊದಿಸಿ ಅಲ್ಲಿಯೇ ಇದ್ದು ಕಾವಲು ಕಾಯುತ್ತಿದ್ದಾರೆ. ಅಲ್ಲದೇ ಶೀಘ್ರವೇ ಸಿಸಿ ಕ್ಯಾಮರಾ ಅಳವಡಿಸುವ ಚಿಂತನೆ ಇದೆ ಎಂದು ಟೊಮೊಟೊ ಬೆಳೆಗಾರರು ತಿಳಿಸಿದ್ದಾರೆ.