ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ, ಎಫ್‍ಐಆರ್ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Update: 2023-09-06 11:22 GMT

ಮುಂಬೈ, ಸೆ.6: ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್‍ಐಆರ್ ಕುರಿತು ಯಾರು ಏನೇ ಮಾಡಿದರೂ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬುಧವಾರ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನು ಬೇಕಾದರೂ ಮಾಡಿಕೊಳ್ಳಲಿ.ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ. ನಾನು ಅಂದು ಹೇಳಿದ್ದು, ಹಾಗೂ ಈಗಲು ಬದ್ಧವಾಗಿರುವ ನಿಲುವು ಎಂದರು.

ಯಾವ ಧರ್ಮವು ಮನುಷ್ಯರ ಮಧ್ಯೆ ಬೇಧ ಭಾವ ಮೂಡಿಸುತ್ತದೆಯೋ, ಯಾವ ಧರ್ಮ ಸಮಾನತೆಯನ್ನು ಸಾರುವುದಿಲ್ಲವೋ. ಅದು ನನ್ನ ಪ್ರಕಾರ ಧರ್ಮವೇ ಅಲ್ಲ.ಅವರಿಗೆ ಅವರ ಧರ್ಮವು ಆ ರೀತಿಯಾಗಿ ಇದೆ ಎನಿಸಿದರೆ, ಅದು ಅವರ ಧರ್ಮದ ಸಮಸ್ಯೆ ನನ್ನ ಸಮಸ್ಯೆಯಲ್ಲ. ಅಷ್ಟೇ ಮಾತ್ರವಲ್ಲದೆ, ನನ್ನ ಧರ್ಮ ಸಂವಿಧಾನ ಮಾತ್ರ ಎಂದು ಅವರು ಹೇಳಿದರು.

ಎಫ್‍ಐಆರ್ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರ ಏನಾದರೂ ಮಾಡಿಕೊಳ್ಳಲಿ. ಕಾನೂನು ಪ್ರಕಿಯೆ ಕ್ರಮಬದ್ಧವಾಗಿ ನಡೆಯುತ್ತದೆ. ನಾವು ಸಂವಿಧಾನ ಬದ್ಧವಾಗಿ ಅದನ್ನು ಎದುರಿಸಲು ಮಾಡಬೇಕಾಗಿದ್ದೆಲ್ಲವನ್ನೂ ಮಾಡುತ್ತೇವೆ ಎಂದು ಸಚಿವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News