ಕಾನೂನು ಕುಣಿಕೆಯಿಂದ ಪಾರಾಗಲು ಖರ್ಗೆ ಕುಟುಂಬ ಜಮೀನು ವಾಪಸ್ ನೀಡಿದೆ : ಜೆಡಿಎಸ್‌

Update: 2024-10-14 07:30 GMT

ಬೆಂಗಳೂರು : "ಕಾನೂನು ಬಾಹಿರವಾಗಿ, ರಾಜಕೀಯ ಪ್ರಭಾವ ಬಳಸಿ 5 ಎಕರೆ ಜಮೀನು ಕಬಳಿಸಿದ್ದ ಖರ್ಗೆ ಕುಟುಂಬ ಕಾನೂನು ಕುಣಿಕೆಯಿಂದ ಪಾರಾಗಲು ಈಗ ಜಮೀನು ವಾಪಸ್ ನೀಡಿದೆ" ಎಂದು ಜೆಡಿಎಸ್‌ ಟೀಕಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಒಡೆತನಕ್ಕೆ ಸೇರಿದ ‘ಸಿದ್ದಾರ್ಥ ವಿಹಾರ ಟ್ರಸ್ಟ್’, ಕೆಐಎಡಿಬಿ ಮಂಜೂರು ಮಾಡಿದ್ದ ಸಿಎ ನಿವೇಶನವನ್ನು ವಾಪಸ್ ನೀಡಲು ನಿರ್ಧರಿಸಿದೆ. ಈ ಕುರಿತು ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್‌, "ಈ ಅಕ್ರಮಗಳ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಿ ದಾಖಲೆಗಳ ಸಮೇತ  ರಾಜ್ಯಪಾಲರಿಗೆ ದೂರು ನೀಡಿತ್ತು. ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಕುಟುಂಬದವರು ಈಗ ಅಕ್ರಮವಾಗಿ ಕಬಳಿಸಿದ್ದ ಸಿಎ ನಿವೇಶನವನ್ನು ಕೆಐಎಡಿಬಿಗೆ ವಾಪಸ್ ನೀಡಿದ್ದಾರೆ.ಭ್ರಷ್ಟರು ಕಬಳಿಸಿದ್ದು ವಾಪಸ್ ಮಾಡಿದರೇ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ ?" ಎಂದು ಪ್ರಶ್ನಿಸಿದೆ.

ʼಮುಡಾ ಹಗರಣ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಕಳಂಕಿತ ಸಿಎಂ ಸಿದ್ದರಾಮಯ್ಯ ಕಾನೂನು ಸುರುಳಿ ಬಿಗಿಯಾಗುತ್ತಿದ್ದಂತೆ ಈಗ ಖರ್ಗೆ ಕುಟುಂಬಕ್ಕೂ ಕಾನೂನಿನ ಭಯ ಶುರುವಾಗಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅಲ್ಲವೇ ಖರ್ಗೆ ಅವರೇ..? ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು. ಕಳ್ಳ ಕದ್ದ ಮಾಲು ವಾಪಸ್ ಕೊಟ್ಟ ತಕ್ಷಣ ಆತನಿಗೆ ವಿನಾಯಿತಿ ಸಾಧ್ಯವಿಲ್ಲ, ತನಿಖೆ ಎದುರಿಸಲೇಬೇಕು ಎಂದು ಜೆಡಿಎಸ್‌ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News