ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ | ಜಪ್ತಿಯಾದ ಒಡವೆ ತಮಿಳುನಾಡು ಸರಕಾರಕ್ಕೆ ಹಿಂತಿರುಗಿಸಲು ಹೈಕೋರ್ಟ್ ಅನುಮತಿ

Update: 2025-01-13 11:13 GMT

ಜಯಲಲಿತಾ | PC:PTI

ಬೆಂಗಳೂರು : ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿಯಾದ ಒಡವೆ ತಮಿಳುನಾಡು ಸರಕಾರಕ್ಕೆ ಹಿಂತಿರುಗಿಸಲು ಹೈಕೋರ್ಟ್ ಅನುಮತಿ ನೀಡಿದೆ.

ಒಡವೆ ಹಸ್ತಾಂತರ ಆಕ್ಷೇಪಿಸಿದ್ದ ಜಯಲಲಿತಾ ವಾರಸುದಾರೆ ಜೆ.ದೀಪಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ‌ ನೀಡಿದೆ.

ಕಳೆದ ವರ್ಷ ಮಾರ್ಚ್ 6, 7 ರಂದು ಒಡವೆ ತಮಿಳುನಾಡು ಸರಕಾರಕ್ಕೆ‌ ಹಸ್ತಾಂತರಿಸಬೇಕಿತ್ತು. ವಿಶೇಷ ಕೋರ್ಟ್ ಆದೇಶದಿಂದ ತಮ್ಮ ಹಕ್ಕಿಗೆ ಧಕ್ಕೆ ಎಂದು ದಿವಂಗತ ಜಯಲಲಿತಾ ವಾರಸುದಾರೆ ಜೆ.ದೀಪಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದ ಜೆ.ದೀಪಾ ಅರ್ಜಿಗೆ ಎಸ್ ಪಿಪಿ ಕಿರಣ್ ಜವಳಿ ಆಕ್ಷೇಪಣೆ ಸಲ್ಲಿಸಿದ್ದರು. ತಮಿಳುನಾಡು ಸರಕಾರದ ಪರ ಹಿರಿಯ ವಕೀಲ‌ ಸಂದೇಶ್ ಚೌಟ ವಾದಿಮಂಡನೆ ಮಾಡಿದ್ದರು

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಜೆ.ದೀಪಾ ಅರ್ಜಿ ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News