ಪಾಕಿಸ್ತಾನ ಪರ ಘೋಷಣೆ ಆರೋಪ ಸಾಬೀತಾದರೆ ನಮ್ಮ ಸರ್ಕಾರ ತಕ್ಕ ಶಾಸ್ತಿ ಮಾಡಲಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ವಿಚಾರದಲ್ಲಿ ಎಫ್ ಎಸ್ ಎಲ್ ವರದಿ ಬರುವ ಮುನ್ನವೇ ಬಿಜೆಪಿಯವರು ಅಪರಾಧ ನಿರ್ಣಯಕ್ಕೆ ಬಂದಿದ್ದಾರೆ. ಬಿಜೆಪಿ ಯವರಿಗೆ ಇಷ್ಟೊಂದು ಆತುರವೇಕೆ.? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಇಲ್ಲಿ ಘೋಷಣೆ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ನಿಜವಾದರೆ ಅಂತಹ ದೇಶದ್ರೋಹಿಗಳಿಗೆ ಕಲಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಅದು 'ನಾಸೀರ್ ಸಾಬ್ ಝಿಂದಾಬಾದೋ? ಅಥವಾ ಪಾಕಿಸ್ತಾನ್ ಝಿಂದಾಬಾದ್' ಘೋಷಣೆಯೋ ಎಂಬುದು ತಿಳಿಯಬೇಕು. ಎಫ್ ಎಸ್ ಎಲ್ ವರದಿ ಬಂದ ನಂತರ ಅದು ಸ್ಪಷ್ಟವಾಗಲಿದೆ. ಅಲ್ಲಿಯವರೆಗೂ ಕಾಯಲು BJPಯವರಿಗೆ ತಾಳ್ಮೆ ಇಲ್ಲವೆಂದರೆ ಹೇಗೆ.? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರದಲ್ಲಿ FSL ವರದಿ ಬರುವ ಮುನ್ನವೇ @BJP4Karnataka ದವರು ಅಪರಾಧ ನಿರ್ಣಯಕ್ಕೆ ಬಂದಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 28, 2024
BJPಯವರಿಗೆ ಇಷ್ಟೊಂದು ಆತುರವೇಕೆ.?
ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ನಿಜವಾದರೆ ಅಂತಹ ದೇಶದ್ರೋಹಿಗಳಿಗೆ ನಮ್ಮ ಸರ್ಕಾರ ತಕ್ಕಶಾಸ್ತಿ ಕಲಿಸದೇ ಬಿಡುವುದಿಲ್ಲ.
ಆದರೆ ಇಲ್ಲಿ ಘೋಷಣೆ…