ತಿಂಗಳಾಂತ್ಯಕ್ಕೆ ಚಲ್ಲಘಟ್ಟ-ವೈಟ್‍ಫೀಲ್ಡ್ ನಡುವಿನ ಮೆಟ್ರೊ ಸಂಚಾರ ಆರಂಭಕ್ಕೆ ಯೋಜನೆ

Update: 2023-08-06 16:46 GMT

ಬೆಂಗಳೂರು, ಆ. 6: ನೇರಳೆ ಮಾರ್ಗದ ಚಲ್ಲಘಟ್ಟ-ವೈಟ್‍ಫೀಲ್ಡ್(ಕಾಡುಗೋಡಿ) ನಿಲ್ದಾಣಗಳ ನಡುವಿನ 43 ಕಿಮೀ ಸಂಚಾರವನ್ನು ತಿಂಗಳಾಂತ್ಯದೊಳಗೆ ಆರಂಭಿಸಲು ಬಿಎಂಆರ್‍ಸಿಎಲ್ ಯೋಜನೆ ರೂಪಿಸಿದೆ.

ಈ ಮಾರ್ಗ ಒಟ್ಟು 37 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗ ಪೂರ್ಣ ಪ್ರಮಾಣದಲ್ಲಿ ತೆರೆಯುವುದರಿಂದ ಜನರು ಪಶ್ಚಿಮ ಭಾಗದಿಂದ ವೈಟ್‍ಫೀಲ್ಡ್(ಐಟಿ ಕಾರಿಡಾರ್)ಗೆ ಸಂಚರಿಸಲು ಅನುಕೂಲವಾಗಲಿದೆ.

ಚಲ್ಲಘಟ್ಟದಿಂದ ವೈಟ್‍ಫೀಲ್ಡ್ ನಡುವಿನ ಪ್ರಯಾಣ ಆರಂಭವಾದರೆ 60-70 ನಿಮಿಷದಲ್ಲಿ ಸಂಚರಿಸಬಹುದಾಗಿದೆ. ರಸ್ತೆ ಮೂಲಕವಾದರೆ ಒಂದೂವರೆ ಗಂಟೆಗೂ ಹೆಚ್ಚಿನ ಅವಧಿ ಬೇಕಾಗುತ್ತದೆ.

ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿರುವ ಕೆಂಗೇರಿಯಿಂದ-ಚಲ್ಲಘಟ್ಟವರೆಗಿನ 1.9 ಕಿ.ಮೀ. ಹಾಗೂ ಬೈಯಪ್ಪನಹಳ್ಳಿನಿಂದ ಕೆ.ಆರ್.ಪುರವರೆಗಿನ 2 ಕಿ.ಮೀ. ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಈ ತಿಂಗಳ ಕೊನೆಯಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿವೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News