ಸ್ಪಂದನಾ ಸಾವಿನ ಬಗ್ಗೆ ದಯವಿಟ್ಟು ಅಪಪ್ರಚಾರ ಮಾಡಬೇಡಿ: ನಟಿ ಮೇಘನಾ ರಾಜ್ ಮನವಿ

Update: 2023-08-09 07:55 GMT

ಸ್ಪಂದನಾ  - ಮೇಘನಾ ರಾಜ್‌ 

ಬೆಂಗಳೂರು: ಕನ್ನಡ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಸಾವಿನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ನಟಿ ಮೇಘನಾ ರಾಜ್‌ ಮನವಿ ಮಾಡಿಕೊಂಡಿದ್ದಾರೆ. 

ಅವರು ಬುಧವಾರ ಮಲ್ಲೇಶ್ವರಂನ ಬಿ.ಕೆ.ಶಿವರಾಂ ನಿವಾಸದಲ್ಲಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ʼʼರಾಘವೇಂದ್ರ ಮತ್ತು  ಸ್ಪಂದನಾ ಇಬ್ಬರೂ ನಮಗೆ ಬಹಳ ಆತ್ಮೀಯರಾಗಿದ್ದರು. ಏನು ನಡೆದಿದೆ, ಏನು ಆಗಿದೆ ಅನ್ನೋದು ಅವರ ಕುಟುಂಬಕ್ಕೆ ಮತ್ತು ವೈದ್ಯರಿಗೆ ತಿಳಿದಿರುತ್ತದೆ. ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ. ಆಕೆಗೆ ಮರ್ಯಾದೆ ಕೊಟ್ಟು , ಆತ್ಮಕ್ಕೆ ಶಾಂತಿ ಕೊಡೊ ತರ ನಡ್ಕೊಳ್ಳಿ. ಮಾದ್ಯ,ಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲದೇ ಇರುವ ಸುದ್ದಿಗಳನ್ನ ಹರಡಬೇಡಿʼ ಎಂದು ಮೇಘನಾ ರಾಜ್‌ ಮನವಿ ಮಾಡಿಕೊಂಡರು. 

ಬಳಿಕ ಮೇಘನಾ ರಾಜ್‌ ಅವರ ತಂದೆ ಸುಂದರ್‌ ರಾಜ್‌ ಮಾತನಾಡಿ, ಸ್ಪಂದನಾ ಕುಟುಂಬ ದುಃಖದಲ್ಲಿದೆ. ಇಂಥ ಸಂದರ್ಭದಲ್ಲಿ ಆಕೆಯ ಸಾವಿನ ಬಗ್ಗೆ ದಯವಿಟ್ಟು ಅಪಪ್ರಚಾರ ಮಾಡಬೇಡಿ ಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News