ಪ್ರಜ್ವಲ್ ರೇವಣ್ಣ ‘ಸಾಮೂಹಿಕ ಅತ್ಯಾಚಾರಿ’ ಹೇಳಿಕೆ : ರಾಹುಲ್ ಗಾಂಧಿ ವಿರುದ್ಧ ಪಿಐಎಲ್ ದಾಖಲು
Update: 2024-07-30 08:07 GMT
ಬೆಂಗಳೂರು: ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ʼಸಾಮೂಹಿಕ ಅತ್ಯಾಚಾರಿʼ ಎಂದು ಕರೆದಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಆಲ್ ಇಂಡಿಯಾ ದಲಿತ್ ಆ್ಯಕ್ಷನ್ ಕಮಿಟಿಯಿಂದ ಪಿಐಎಲ್ ಸಲ್ಲಿಸಿದ್ದು, ಪ್ರಜ್ವಲ್ ರೇವಣ್ಣರಿಂದ 400 ಮಹಿಳೆಯ ಮೇಲೆ ಅತ್ಯಾಚಾರ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತಗಳಿಸಲು ರಾಹುಲ್ ಗಾಂಧಿ ಮಾಡಿದ ಸುಳ್ಳು ಆರೋಪದಿಂದ ಹಾಸನ ಹಾಗೂ ರಾಜ್ಯದ ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ. ರಾಹುಲ್ ಗಾಂಧಿಯ ಸಂವಿಧಾನಬಾಹಿರ ಹೇಳಿಕೆ ವಿರುದ್ದ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.