ಪಾಕ್ ಪರ ಘೋಷಣೆ ಪ್ರಕರಣ; ಸಮಗ್ರ ತನಿಖೆಗೆ ಬಿ.ವೈ.ವಿಜಯೇಂದ್ರ ಆಗ್ರಹ

Update: 2024-03-04 14:52 GMT

ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಿದ ತಕ್ಷಣ ನ್ಯಾಯ ಸಿಕ್ಕಿದಂತಲ್ಲ. ದೇಶದ್ರೋಹಿಗಳೆಲ್ಲರನ್ನೂ ಬಂಧಿಸಬೇಕು. ಇವರ ಹಿನ್ನೆಲೆ ಏನು? ವಿಧಾನಸೌಧದ ಒಳಗೆ ಘೋಷಣೆ ಕೂಗಲು ಪ್ರಚೋದನೆ ಕೊಟ್ಟವರು ಯಾರು? ಇವರ ಜೊತೆ ಯಾರೆಲ್ಲ ಸಂಪರ್ಕದಲ್ಲಿ ಇದ್ದಾರೆಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಪಕ್ಷಗಳ ಒತ್ತಾಯಕ್ಕೆ ಮಣಿದು 3 ಜನರನ್ನು ಬಂಧಿಸಿದ ಮಾಹಿತಿ ಲಭಿಸಿದೆ. ಖಾಸಗಿ ಎಫ್‍ಎಸ್‍ಎಲ್ ವರದಿ ಮೂರು ದಿನಗಳಿಂದ ಹರಿದಾಡುತ್ತಿದೆ. ಅಧಿಕೃತ ಎಫ್‍ಎಸ್‍ಎಲ್ ವರದಿ ಲಭಿಸಿದ್ದರೂ ಅದನ್ನು ಬಹಿರಂಗಪಡಿಸದೆ ವಿಳಂಬ ಮಾಡಲಾಗಿತ್ತು ಎಂದು ಆಕ್ಷೇಪಿಸಿದರು.

ಕೇವಲ ನಾಮಕಾವಾಸ್ತೆ ಬಂಧಿಸಿ ಒಳಗೆ ರಾಜಾತಿಥ್ಯ ಕೊಡುವ ಬದಲು ಸತ್ಯ ಏನೆಂದು ಸರಕಾರ ಬಹಿರಂಗಪಡಿಸಬೇಕು. ಘೋಷಣೆ ಕೂಗಿದವರು ಅಮಾಯಕರು ಎಂದು ಶಾಸಕರು, ಸಚಿವರು ಒತ್ತಾಯ ತರಬಹುದು. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂತಹ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News