ಪಿಎಸ್ಸೈ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಯ ಅಗತ್ಯತೆ ಇಲ್ಲ ಎಂದ ಡಾ.ಜಿ.ಪರಮೇಶ್ವರ್

Update: 2023-07-16 17:31 GMT

ಬೆಂಗಳೂರು: ಪಿಎಸ್ಸೈ ನೇಮಕಾತಿ ಹಗರಣ ಸಂಬಂಧ ತನಿಖೆ ಮುಂದುವರೆದಿದೆ. ಆದರೆ, ಸದ್ಯಕ್ಕೆ ನ್ಯಾಯಾಂಗ ತನಿಖೆಯ ಅಗತ್ಯತೆ ಇಲ್ಲ. ಯಾವುದೇ ಅನುಮಾನಸ್ಪದ ಮಾಹಿತಿಗಳು ತಿಳಿದುಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 545 ಪಿಎಸ್ಸೈಗಳ ನೇಮಕಾತಿಗೆ ಆಗಿನ ಸರಕಾರ ಅಧಿಸೂಚನೆ ಹೊರಡಿಸಿತ್ತು. ಹಗರಣದ ಬಳಿಕ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರಕಾರ ಹೈಕೋರ್ಟ್ ಆದೇಶವನ್ನು ನಿರೀಕ್ಷೆ ಮಾಡುತ್ತಿತ್ತು. ಆದರೆ ನ್ಯಾಯಾಲಯ ಸರಕಾರಕ್ಕೆ ಅಭಿಪ್ರಾಯ ನೀಡುವಂತೆ ಸೂಚನೆ ನೀಡಿದೆ ಎಂದರು.

ಅಲ್ಲದೆ, ಸರಕಾರದ ನಿಲುವನ್ನು ಅಡ್ವೋಕೇಟ್ ಜನರಲ್ ಅವರು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‍ಗೆ ಸಲ್ಲಿಸಿದ್ದಾರೆ. ಅಲ್ಲಿಂದ ನಿರ್ದೇಶನಗೊಂಡ ಬಳಿಕ 545 ಮತ್ತು 400 ಪಿಎಸ್ಸೈಗಳ ನೇಮಕಾತಿಗೆ ತ್ವರಿತ ಕ್ರಮ ಕೈಗೊಳ್ಳುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News