ನಾನು ವರ್ಗಾವಣೆ ದಂಧೆ ನಡೆಸಿದ ದಾಖಲೆ ನೀಡಿದರೆ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ

Update: 2023-07-06 16:49 GMT

ಬೆಂಗಳೂರು, ಜು. 6: ‘ನಾನು ಯಾವುದಾದರೂ ವರ್ಗಾವಣೆ ವಿಷಯದಲ್ಲಿ ಭಾಗಿಯಾದ ದಾಖಲಾತಿ ನೀಡಿದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಸರಕಾರ ದಿನದ 24 ಗಂಟೆಯೂ ವರ್ಗಾವಣೆ ದಂಧೆಯನ್ನೇ ನಡೆಸುತ್ತಿದೆ. ಅಭಿವೃದ್ಧಿ ಬದಲು ನಗದು ಅಭಿವೃದ್ಧಿಯಲ್ಲಿ ತೊಡಗಿದೆ. ಇದನ್ನು ಹೇಳಿದರೆ ನಮ್ಮ ಮೇಲೆಯೇ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಈ ಸರಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗಳಿಗೆ ಸಂಬಂಧಿಸಿ ನನ್ನಲ್ಲಿ ದಾಖಲೆಗಳಿವೆ. ಅದರಲ್ಲಿ ಯಾರಿಗೂ ಅನುಮಾನ ಬೇಡ. ಅದನ್ನು ಬಿಡುಗಡೆ ಮಾಡಬೇಕಾದ ಸಂದರ್ಭದಲ್ಲಿ ಮಾಡುತ್ತೇನೆ. ಯಾವಾಗ, ಎಲ್ಲಿ ಬಿಡುಗಡೆ ಮಾಡುತ್ತೇನೆ ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಹಲವು ವರ್ಷಗಳು ಕೆಲಸ ಮಾಡಿದ್ದಾರೆ, ಅವರು ಎಂದಾದರೂ ದಾಖಲೆ ಬಿಡುಗಡೆ ಮಾಡಿದ್ದರಾ?’ ಎಂದು ಕುಮಾರಸ್ವಾಮಿ ಪ್ರಶ್ನಿದರು.

‘ಸಿದ್ದರಾಮಯ್ಯ ಅವರು ಎಂದೂ ದಾಖಲೆ ಇಟ್ಟು ಮಾತನಾಡಿದನ್ನು ನಾನು ನೋಡಲೇ ಇಲ್ಲ. ದಾಖಲೆ ಬಿಡುಗಡೆ ಮಾಡಿದ್ದು ಇದ್ದರೆ ತೋರಿಸಲಿ. ಬಹುಮತದ ಸರಕಾರ ತಂದುಕೊಂಡು ಈಗ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ’ ಎಂದು ಕುಮಾರಸ್ವಾಮಿ ಟೀಕಿಸಿದರು.

‘ಮೈಸೂರಿನಲ್ಲಿ ವರ್ಗಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಮನೆಯಲ್ಲಿ ಸಿಎಂ ಪುತ್ರ ಮಲಗಿರುವ ಸಂದರ್ಭದಲ್ಲಿ ಇμÁ್ಟಗಿದೆ. ಇನ್ನೂ ಹೊರಗೆ ಬಂದರೆ ಏನಾಗಬಹುದು ಎಂದು ಜನ ಕೇಳುತ್ತಿದ್ದಾರೆ. ನಾನು ದ್ವೇಷದ ರಾಜಕೀಯ ಮಾಡ್ತಿಲ್ಲ, ವಿರೋಧ ಪಕ್ಷದ ಸದಸ್ಯನಾಗಿ ನನ್ನ ಕೆಲಸ ಮಾಡ್ತಿದ್ದೇನೆ. ಸತ್ಯ ಹೇಳುವುದೇ ತಪ್ಪೇ? ಎಂದು ಕುಮಾರಸ್ವಾಮಿ ಕೇಳಿದರು.

ದಾಖಲೆ ಬಿಟ್ಟೇ ಬಿಡುತ್ತೇನೆ: ‘ಪೈನ್‍ಡ್ರೈವ್ ಬಿಡುಗಡೆ ವಿಚಾರದಲ್ಲಿ ನಾನು ಹೆದರಿ ಓಡಿ ಹೋಗುವ ವ್ಯಕ್ತಿ ಅಲ್ಲ. ಹಿಟ್ ಅಂಡ್ ರನ್ ಮಾಡುವುದಿಲ್ಲ. ಕಾಂಗ್ರೆಸ್ ನಾಯಕರು ಏನು ಮಾತಾಡ್ತಾರೆ ಎಂದು ನೋಡೋಣ. ನನ್ನ ಬಳಿ ಇರುವ ಪೆನ್‍ಡ್ರೈವ್ ಅಸಲಿ, ಹೈದ್ರಾಬಾದ್‍ನಲ್ಲಿ ಮಾಡಿಸಿದ್ದಲ್ಲ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಏನು ಎಂದು ಅವರು ಹೇಳಲಿ. ಆ ಮೇಲೆ ದಾಖಲೆ ಬಹಿರಂಗ ಪಡಿಸುತ್ತೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News