ಶಿವಮೊಗ್ಗ: ರಾಜ್ಯಪಾಲರ ಭಾಷಣದ ವೇಳೆ ಕುಲಪತಿ ವಿರುದ್ಧ ಘೋಷಣೆ; ಹಲವರು ಪೊಲೀಸ್ ವಶಕ್ಕೆ

Update: 2023-07-22 07:24 GMT

ಶಿವಮೊಗ್ಗ: ನಗರದ ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹಲೋತ್ ಅವರ ಭಾಷಣದ ವೇಳೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಸಭಾಂಗಣದ ಬಾಲ್ಕನಿಯಲ್ಲಿ ಕುಳಿತಿದ್ದ ಕೆಲವರು ರಾಜ್ಯಪಾಲರು ಭಾಷಣ ಮಾಡುವಾಗಲೇ ಘೋಷಣೆ ಕೂಗಲು ಆರಂಭಿಸಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಧಿಕ್ಕಾರ ಕೂಗಿ ಕಪ್ಪು ಬಾವುಟ ಪ್ರದರ್ಶಿಸಿದರು. ಈ ವೇಳೆ ಸಭಾಂಗಣ ಪ್ರವೇಶಿಸಿದ ಪೊಲೀಸರು ಘೋಷಣೆ ಕೂಗುವವರನ್ನು ಸಭಾಂಗಣದಿಂದ ಹೊರಗೆ ಕರೆತಂದು ವಾಹನದಲ್ಲಿ ಕರೆದೊಯ್ದರು ಎಂದು ತಿಳಿದು ಬಂದಿದೆ.

ಗದ್ದಲದ ನಡುವೆಯೇ ಭಾಷಣ ಮುಂದುವರೆಸಿದ ರಾಜ್ಯಪಾಲರು ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತಾ, 'ಘೋಷಣೆ ಕೂಗಿದ ಗುಂಪಿನ ನಾಲ್ವರು ಬಂದು ನಂತರ ನನ್ನನ್ನು ಭೇಟಿಯಾಗಲಿ, ಅವರ ಸಮಸ್ಯೆ ಆಲಿಸುವೆ. ಏನಾದರೂ ತೊಂದರೆ ಆಗಿದ್ದರೆ ಪರಿಹರಿಸುವೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News