ಸಿದ್ದರಾಮಯ್ಯನವರೇ ರೈತರಿಗೆ ಪರಿಹಾರ ಕೊಡಿ, ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ : ಬಿಜೆಪಿ
Update: 2024-10-31 06:37 GMT
ಬೆಂಗಳೂರು : "ಭೂತಾಯಿ ಮಕ್ಕಳ ವಿರುದ್ಧ ಸದಾ ಕತ್ತಿ ಮಸಿಯುತ್ತಿರುವ ಕಾಂಗ್ರೆಸ್ ಸರಕಾರ, ಅಕಾಲಿಕ ಮಳೆಗೆ ಈರುಳ್ಳಿ ಸೇರಿ ಇತರ ಬೆಳೆ ಕಳೆದುಕೊಂಡ ರೈತರು, ಪರಿಹಾರಕ್ಕಾಗಿ ಅಂಗಲಾಚುತ್ತಿದ್ದರೂ ಸ್ಪಂದಿಸದೆ ಸಂಕಷ್ಟದ ಕೂಪಕ್ಕೆ ತಳ್ಳಿದೆ" ಎಂದು ರಾಜ್ಯ ಸರಕಾರದ ವಿರುದ್ಧ ಬಿಜೆಪಿಯು ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ʼರಾಜ್ಯಾದ್ಯಂತ ಅನ್ನದಾತರು ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಭತ್ತ ಇತರ ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಭಷ್ಟ ಸಿದ್ದರಾಮಯ್ಯನವರ ಸರಕಾರ ಮಾತ್ರ ಗಾಯದ ಮೇಲೆ ಬರೆ ಎಳೆದಂತೆ ಕೃಷಿಕರ ಭೂಮಿ ಕಬಳಿಸುತ್ತಿದೆʼ ಎಂದು ಆರೋಪಿಸಿದೆ.
ʼಕೃಷಿ ಇಲಾಖೆಯನ್ನೇ ಮರೆತಿರುವ ಸಚಿವ ಚಲುವನಾರಾಯಣ ಸ್ವಾಮಿ, ಕೃಷ್ಣಬೈರೇಗೌಡ ಹಾಗೂ ಸಿದ್ದರಾಮಯ್ಯನವರೇ, ನೊಂದು, ಬೆಂದ ರೈತರಿಗೆ ಮೊದಲು ಪರಿಹಾರ ಕೊಡಿ, ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿʼ ಎಂದು ಅಸಮಾಧಾನ ವ್ಯಕ್ತಪಡಿಸಿದೆ.