ವಾಲ್ಮೀಕಿ ನಿಗಮದ ಹಗರಣ ಪ್ರಕರಣ: ಆರೋಪಿಯ ಮನೆಯಲ್ಲಿ 10 ಕೆ.ಜಿ. ಚಿನ್ನದ ಬಿಸ್ಕೆಟ್ ವಶಕ್ಕೆ; ವರದಿ

Update: 2024-07-27 14:19 GMT

ಸಾಂದರ್ಭಿಕ ಚಿತ್ರ (Credit:outlookindia.com)

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿಯ ಎಸ್‍ಐಟಿ ತಂಡ, ಆರೋಪಿಯ ಮನೆಯಲ್ಲಿ 10ಕೆ.ಜಿ. ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಆರೋಪಿ ಸತ್ಯನಾರಾಯಣ ವರ್ಮಾ ಎಂಬವರ ಹೈದರಾಬಾದ್ ಮನೆಯಲ್ಲಿ 10 ಕೆ.ಜಿ. ಚಿನ್ನದ ಬಿಸ್ಕೆಟ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಎಸ್‍ಐಟಿ ಮೂಲಗಳು ತಿಳಿಸಿವೆ.

ಸತ್ಯನಾರಾಯಣ್ ವರ್ಮಾ ಅವರು ವಾಲ್ಮೀಕಿ ನಿಗಮದ ಹಗರಣದ ಹಣದಿಂದಲೇ ಚಿನ್ನದ ಬಿಸ್ಕೆಟ್‍ಗಳನ್ನು ಖರೀದಿಸಿದ್ದು, ಆರೋಪಿಯು ಒಟ್ಟು 35 ಕೆ.ಜಿ. ಚಿನ್ನದ ಬಿಸ್ಕೆಟ್ ಖರೀದಿ ಮಾಡಿರುವುದಾಗಿ ಎಸ್‍ಐಟಿ ತಂಡ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಹಣ, ಚಿನ್ನದ ಬಿಸ್ಕೆಟ್ ಖರೀದಿ ಜೊತೆಗೆ ಆರೋಪಿ ಸತ್ಯನಾರಾಯಣ್ ವರ್ಮಾ ಅವರು ಹೈದರಾಬಾದ್‍ನ ಸೀಮಾಪೇಟೆ, ಮೀಯಾಪುರದಲ್ಲಿನ ವಾಸವಿ ಬಿಲ್ಡರ್ಸ್‍ನಲ್ಲಿ ತಲಾ ಎರಡು ನಿವೇಶನ ಖರೀದಿ ಸೇರಿ ಒಟ್ಟು 11 ನಿವೇಶನಗಳನ್ನು ಖರೀದಿ ಮಾಡಿರುವ ಬಗ್ಗೆ ಎಸ್‍ಐಟಿ ಪೊಲೀಸರು ಪತ್ತೆಹಚ್ಚಿರುವುದಾಗಿ ತಿಳಿದುಬಂದಿದೆ.

ಹೈದರಾಬಾದ್‍ನ ನಿವೇಶನವೊಂದರಲ್ಲಿ ಆರೋಪಿ ವರ್ಮಾ ಅಡಗಿಸಿಟ್ಟಿದ್ದ 8 ಕೋಟಿ ರೂ. ಹಣ ಪೊಲೀಸರ ಶೋಧ ಕಾರ್ಯಾಚರಣೆ ವೇಳೆ ಸಿಕ್ಕಿರುವುದಾಗಿ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News