ಚಿನ್ನದ ಬೆಲೆಯಲಿ ಅಲ್ಪ ಇಳಿಕೆ; ಇವತ್ತು ಒಂದು ಗ್ರಾಂ ಚಿನ್ನಕ್ಕೆ ಎಷ್ಟು ಬೆಲೆ?
Update: 2025-03-24 20:03 IST

ಸಾಂದರ್ಭಿಕ ಚಿತ್ರ
ಬೆಂಗಳೂರು: ಸೋಮವಾರ ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಪ್ರತಿ ಗ್ರಾಂನ ಬೆಲೆ 8,962 ರೂ.ನಷ್ಟಿದ್ದರೆ, 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,215 ರೂ.ನಷ್ಟಿತ್ತು. ಅದರಂತೆ ಒಂದು ಪವನ್ ಅಥವಾ 8 ಗ್ರಾಂ ಚಿನ್ನವು ಸೋಮವಾರ 65720 ರೂ. ಗೆ ಮಾರಾಟವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಸೋಮವಾರ ದಿಲ್ಲಿಯಲ್ಲಿ 24 ಕ್ಯಾರಟ್ ಚಿನ್ನದ ಪ್ರತಿ 10 ಗ್ರಾಂನ ಬೆಲೆ 8,999 ರೂ.ನಷ್ಟಿದ್ದರೆ, ನಿನ್ನೆ (ರವಿವಾರ) ಪ್ರತಿ 10 ಗ್ರಾಂಗೆ 90,383.10 ರೂ.ನಷ್ಟಿತ್ತು. ಚೆನ್ನೈನಲ್ಲಿ ಪ್ರತಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 89,791 ರೂ.ನಷ್ಟಿತ್ತು. ಹೀಗಾಗಿ, ನಿನ್ನೆಯ ಬೆಲೆಯಾದ 90,231 ರೂ.ಗೆ ಹೋಲಿಸಿದರೆ, ಇಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂ. ಇಳಿಕೆಯಾದಂತಾಗಿದೆ.
ಮುಂಬೈನಲ್ಲಿ 24 ಕ್ಯಾರಟ್ ಚಿನ್ನದ ಪ್ರತಿ 10 ಗ್ರಾಂನ ಬೆಲೆ 89,797 ರೂ.ನಷ್ಟಿದ್ದು, ನಿನ್ನೆಯ ದರವಾದ 90,237 ರೂ.ಗೆ ಹೋಲಿಸಿದರೆ, 440 ರೂ. ಇಳಿಕೆಯಾಗಿದೆ.