ನಾಳೆ ಸೋಮನಹಳ್ಳಿ ಕಾಫಿ ಡೇ ಆವರಣದಲ್ಲಿ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ

Update: 2024-12-10 06:19 GMT

x.com/WestBlockBlues

ಮಂಡ್ಯ, ಡಿ.10: ಬೆಂಗಳೂರಿನಲ್ಲಿ ನಿಧನರಾಗಿರುವ ಮಾಜಿ ಸಿಎಂ ಎಸ್​ಎಂ ಕೃಷ್ಣ ಅಂತ್ಯಕ್ರಿಯೆ ಅವರ ತವರು ಮದ್ದೂರಿನ ಸೋಮನಹಳ್ಳಿಯ ಕಾಫಿಡೇ ಆವರಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 ವಿದೇಶದಿಂದ ಸಂಬಂಧಿಕರು ಬರಬೇಕಿರುವ ಹಿನ್ನೆಲೆ ನಾಳೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದ್ದು, ಮದ್ದೂರಿನ ಸೋಮನಹಳ್ಳಿಯಲ್ಲಿರುವ ಕಾಫಿ ಡೇ ಆವರಣದಲ್ಲಿ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.

ಸೋಮನಹಳ್ಳಿಯಲ್ಲಿ ಎಸ್​ಎಂ ಕೃಷ್ಣ  ನಿರ್ಮಿಸಿದ್ದ ಬೃಹತ್ ಮನೆ ಅವರ ಇಷ್ಟದ ಸ್ಥಳ.  ಆದರೆ, ಬೆಂಗಳೂರು ಸೇರಿದ ಮೇಲೆ ಅವರ  ಆ ಮನೆ ಖಾಲಿ ಇತ್ತು. ನಂತರದಲ್ಲಿ ಅವರು ಆ ಮನೆಯನ್ನು ಅಳಿಯ ಸಿದ್ದಾರ್ಥ್ ಅವರ ಕಾಫಿ ಡೇ ಗೆ ನೀಡಿದ್ದರು.

ಮಂಡ್ಯಕ್ಕೆ ಬಂದಾಗಲೆಲ್ಲ ಕಾಲ ಕಳೆಯುತ್ತಿದ್ದ ಅವರಿಗೆ ಇಷ್ಟವಾಗಿದ್ದ ಕಾಫಿ ಡೇ ಆವರಣದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದ್ದು,  ಅಂತ್ಯಸಂಸ್ಕಾರಕ್ಕೆ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಸಿದ್ಧತೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News