ಶಿವಮೊಗ್ಗ | ಪತಿಯಿಂದಲೇ ಪತ್ನಿಯ ಕೊಲೆ
Update: 2024-12-11 07:01 GMT
ಶಿವಮೊಗ್ಗ: ಪತಿಯು ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಶಿಕಾರಿಪುರ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
ರೇಣುಕಾ(40) ಕೊಲೆಯಾದ ಮಹಿಳೆ. ಅವರ ಪತಿ ನಾಗರಾಜ್(45) ಕೊಲೆ ಆರೋಪಿಯಾಗಿದ್ದಾನೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಯನ್ನು ಶಿಕಾರಿಪುರ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ.
ಕೌಟುಂಬಿಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದ್ದು, ಶಿಕಾರಿಪುರ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಸಂಬಂಧ ಶಿಕಾರಿಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.