ಎಸೆಸೆಲ್ಸಿ ಪರೀಕ್ಷೆ: ಸೋಮವಾರ ನಡೆದ ಪರೀಕ್ಷೆಗೆ 18,554 ಮಂದಿ ಗೈರು
Update: 2025-03-24 19:46 IST

ಸಾಂದರ್ಭಿಕ ಚಿತ್ರ | PC: pexels
ಬೆಂಗಳೂರು : ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಯು ನಡೆಯುತ್ತಿದ್ದು, ಸೋಮವಾರ ನಡೆದ ಗಣಿತ ಮತ್ತು ಸಮಾಜಶಾಸ್ತ್ರ ಪರೀಕ್ಷೆಯಲ್ಲಿ 18,554 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪರೀಕ್ಷೆಗಳಿಗೆ 8,44,937 ಮಂದಿ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. 8,26,383 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.97.80ರಷ್ಟು ಮಂದಿ ಪರೀಕ್ಷೆಯನ್ನು ಬರೆದಿದ್ದಾರೆ.
ಕಲಬುರಗಿಯಲ್ಲಿ 2,196 ವಿದ್ಯಾರ್ಥಿಗಳು, ರಾಯಚೂರಿನಲ್ಲಿ 1,188 ವಿದ್ಯಾರ್ಥಿಗಳು, ವಿಜಯಪುರದಲ್ಲಿ 1,175 ವಿದ್ಯಾರ್ಥಿಗಳು, ಬೀದರ್‌ನಲ್ಲಿ 1,142 ವಿದ್ಯಾರ್ಥಿಗಳು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ 1,108 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.