ಹನಿಟ್ರ್ಯಾಪ್ ಆರೋಪ : ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
Update: 2025-03-26 12:02 IST

ಸುಪ್ರೀಂ ಕೋರ್ಟ್ | PC: PTI
ಬೆಂಗಳೂರು : ಕರ್ನಾಟಕದಲ್ಲಿ ಚರ್ಚೆಗೆ ಗ್ರಾಸವಾಗಿರುವ ಹನಿಟ್ರ್ಯಾಪ್ ಆರೋಪದ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಮಾಡಲಾಗುತ್ತಿದೆ ಎಂದು ಸಚಿವ ರಾಜಣ್ಣ ಆರೋಪಿಸಿದ್ದರು. ಇದು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಮೂಲದ ವಕೀಲ ವಿನಯ್ ಕುಮಾರ್ ಸಿಂಗ್ ಎಂಬವರು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಈ ಕುರಿತು ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.
ʼನೀವು ಜಾರ್ಖಂಡ್‌ನವರು ಕರ್ನಾಟಕದ ವಿದ್ಯಾಮಾನಕ್ಕೂ ನಿಮಗೂ ಏನು ಸಂಬಂಧ? ನ್ಯಾಯಾಧೀಶರು ಏಕೆ ಹನಿಟ್ರ್ಯಾಪ್‌ಗೆ ಒಳಗಾಗುತ್ತಾರೆ. ಅದನ್ನು ಅವರೇ ನೋಡಿಕೊಳ್ಳುತ್ತಾರೆʼ ಎಂದು ಸುಪ್ರೀಂ ಕೋರ್ಟ್ ಪೀಠವು ಪಿಐಎಲ್ ತಿರಸ್ಕರಿಸುವ ವೇಳೆ ಅರ್ಜಿದಾರರಿಗೆ ಹೇಳಿದೆ.