ವಿದ್ಯಾರ್ಥಿಗಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ: ಸಿಪಿಐ(ಎಂಎಲ್) ಖಂಡನೆ

Update: 2023-12-19 14:42 GMT

ಬೆಂಗಳೂರು: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲುವಳ್ಳಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗಳಿಂದ ಮಲದ ಗುಂಡಿಯನ್ನು ಸ್ವಚ್ಛ ಮಾಡಿಸಿರುವ ಅಮಾನವೀಯ ಘಟನೆಯನ್ನು ಸಿಪಿಐ(ಎಂಎಲ್) ಲಿಬರೇಶನ್ ತೀವ್ರವಾಗಿ ಖಂಡಿಸಿದೆ.

ವಸತಿಶಾಲೆಯಲ್ಲಿ ಮಲದ ಗುಂಡಿಯನ್ನು ಶುಚಿಗೊಳಿಸುವಂತೆ ದಲಿತ ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗಿದೆ ಎಂದು ಮಾಸ್ತಿ ಪೊಲೀಸ್‍ಠಾಣೆಯಲ್ಲಿ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಇತರೆ ನಾಲ್ಕು ಸಿಬ್ಬಂಧಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಥಮ ವರ್ತಮಾನ ವರದಿ ದಾಖಲಾಗಿದೆ ಎಂಬ ಮಾಹಿತಿಯು ಪಕ್ಷಕ್ಕೆ ಲಭ್ಯವಾಗಿದೆ ಎಂದು ತಿಳಿಸಿದೆ.

ಶಿಕ್ಷಣ ಸಂಸ್ಥೆಯೇ ಇಂತಹ ನೀಚ ಕೆಲಸ ಮಾಡಿಸಿದೆ. ಇದು ಸಮಾನತೆ ಮತ್ತು ಮಾನವ ಘನತೆಯ ತತ್ವಗಳಿಗೆ ವಿರುದ್ಧವಾದ ಅವಮಾನಕರ ಮತ್ತು ತಾರತಮ್ಯದ ಕೃತ್ಯವಾಗಿದೆ. ನಮ್ಮ ಸಮಾಜದಲ್ಲಿ, ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ನಿದರ್ಶನಗಳನ್ನು ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ, ಇದು ಅಕ್ಷಮ್ಯ ಅಪರಾಧ, ಇದು ಕೊನೆಗೊಳ್ಳಲೇ ಬೇಕು ಎಂದು ಒತ್ತಾಯಿಸಿದೆ.

ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ಸರಕಾರ ಮತ್ತು ಕೋಲಾರ ಜಿಲ್ಲಾಡಳಿತ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕು. ಸಮಾನತೆ ವಾತಾವರಣವನ್ನು ಬೆಳೆಸಲು ಶಾಲಾ ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಂವೇದನಾಶೀಲ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೋಜಾರಿಯೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News