ಕಾಂಗ್ರೆಸ್ ನಿಂದ ಇಬ್ಬರು ಗ್ರಾ.ಪಂ ಸದಸ್ಯರ ಅಮಾನತು
Update: 2023-08-10 17:46 GMT
ಮಡಿಕೇರಿ ಆ.10 : ಪಕ್ಷ ವಿರೋಧಿ ಧೋರಣೆ ಹಿನ್ನೆಲೆ ಮಾಲ್ದಾರೆ ಗ್ರಾ.ಪಂ ಯ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಕಿರಣ್ ಹಾಗೂ ಹನೀಫ್ ಅವರನ್ನು ಕಾಂಗ್ರೆಸ್ ನಿಂದ ಅಮಾನತುಗೊಳಿಸಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.
ಎರಡನೇ ಅವಧಿಯ ಅಧಿಕಾರಕ್ಕೆ ಮಾಲ್ದಾರೆ ಗ್ರಾ.ಪಂ ಗೆ ಚುನಾವಣೆ ನಡೆದ ಸಂದರ್ಭ ಇವರಿಬ್ಬರು ಗೈರು ಹಾಜರಾಗಿದ್ದರು. ಅಲ್ಲದೆ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸದೆ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷರು ನೀಡಿದ ದೂರಿನ ಹಿನ್ನೆಲೆ ಕಿರಣ್ ಹಾಗೂ ಹನೀಫ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.