ರಾಜ್ಯದಲ್ಲಿ ತಾಪಮಾನ ಏರಿಕೆ | ಕಲಬುರಗಿಯಲ್ಲಿ ಗರಿಷ್ಟ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ದಾಖಲು
Update: 2025-03-24 19:39 IST

ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಸೋಮವಾರದಂದು ಕಲಬುರಗಿಯಲ್ಲಿ ಗರಿಷ್ಟ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‍ಗೆ ತಲುಪಿದೆ. ಕನಿಷ್ಟ ಉಷ್ಣಾಂಶ ಧಾರವಾಡದಲ್ಲಿ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹೊನ್ನಾವರದಲ್ಲಿ 32.8 ಡಿಗ್ರಿ ಸೆಲ್ಸಿಯಸ್, ಕಾರವಾರದಲ್ಲಿ 35.2, ಮಂಗಳೂರಿನಲ್ಲಿ 33.6, ಬೆಳಗಾವಿಯಲ್ಲಿ 37, ಬೀದರ್‌ನಲ್ಲಿ 35, ಬಾಗಲಕೋಟೆಯಲ್ಲಿ 38.5, ಹಾವೇರಿಯಲ್ಲಿ 36, ಕೊಪ್ಪಳ 37.5, ಚಾಮರಾಜನಗರ 33.4 ಚಿತ್ರದುರ್ಗದಲ್ಲಿ 36, ಶಿವಮೊಗ್ಗ 35.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.