200ಕ್ಕೂ ಹೆಚ್ಚು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೊಳಿಸಿ ಸರಕಾರ ಆದೇಶ
ಬೆಂಗಳೂರು, ಆ.1: ರಾಜ್ಯ ಸರಕಾರ ಒಂದೇ ದಿನ 211 ಪೊಲೀಸ್ ಇನ್‌ಸ್ಪೆಕ್ಟರ್‌ಗಳ(ಸಿವಿಲ್) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಪೊಲೀಸರು ಸೂಚಿಸಿದ ಸ್ಥಳಗಳಿಗೆ ತಕ್ಷಣಕ್ಕೆ ವರದಿ ಮಾಡಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.
ಬೆಂಗಳೂರಿನ ಪ್ರಮುಖ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಪೊಲೀಸ್ ಇನ್ ಸ್ಪೆಕ್ಟರ್ ಗಳ ಪಟ್ಟಿ:
ವಜ್ರಮುನಿ ಕೆ.( ಸಿಟಿ ಮಾರ್ಕೆಟ್ ಬೆಂಗಳೂರು ನಗರ), ರವಿಕುಮಾರ್ ಹೆಚ್.ಕೆ.(ಪುಟ್ಟೇನಹಳ್ಳಿ ಪೊ.ಠಾ.,ಬೆಂಗಳೂರು ನಗರ), ಹರಿಯಪ್ಪ ಹೆಚ್.(ಸೋಲದೇವನಹಳ್ಳಿ), ಪ್ರೀತಮ್ ಎ.ಡಿ.(ಹೆಚ್.ಎಸ್.ಆರ್. ಲೇ ಔಟ್), ಬಸವರಾಜು ಎಂ.(ಜೀವನ್‌ಭೀಮಾನಗರ ಪೊ.ಠಾ), ಪ್ರವೀಣ್ ಬಾಬು ಜಿ.(ಮಹದೇವಪುರ ಪೊ.ಠಾ.,), ಗೋವಿಂದರಾಜು ಎಂ(ಪೀಣ್ಯ ಪೊ.ಠಾ., ಬೆಂಗಳೂರು), ಚಿಕ್ಕಸ್ವಾಮಿ(ಬಸವೇಶ್ವರನಗರ),ಸುನಿಲ್ ಹೆಚ್. ಬಿ.(ಕೆಜಿ ಹಳ್ಳಿ ಬೆಂಗಳೂರು), ಪಾರ್ವತಮ್ಮ ಎಸ್(ಕೆ. ಆರ್.ಪುರಂ), ಯೋಗೇಶ್ ಎಸ್. ಟಿ (ಕಾಮಾಕ್ಷಿ ಪಾಳ್ಯ), ನವೀನ್ ಪಿ.ಎಂ.(ಕೆಂಪೇಗೌಡ ನಗರ), ಚಿತ್ತರಂಜನ್ ಡಿ (ಆರ್. ಟಿ.ನಗರ), ಮಂಜು ಎಚ್. ಎ.(ರಾಜಾಜಿ ನಗರ), ರವಿಕುಮಾರ್ ಎಂ.ಸಿ.(ಶಿವಾಜಿ ನಗರ), ಮಾರುತಿ.ಬಿ(ಉಪ್ಪಾರ ಪೇಟೆ) ,ಮಲ್ಲೇಶ ಎ (ಹೆಬ್ಬಾಳ), ಲಕ್ಷ್ಮಣ ಜೆ(ನಂದಿನಿ ಲೇ ಔಟ್)